Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಮಾರುತಿ ವೀಥಿಕಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ

0


ಉಡುಪಿ : ಮಾರುತಿ ವೀಥೀಕಾದ ಜೋಸ್ ಆಲುಕಾಸ್ ಆಭರಣದ ಮಳಿಗೆಯ ಮುಂಭಾಗದಲ್ಲಿ ಕನ್ನಡ ಚಿತ್ರನಟ ಕೊಡುಗೈ ದಾನಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಉದ್ಯಮಿ ಗುರುರಾಜ ಎಮ್ ಶೆಟ್ಟಿ ‌ರವರು ಪುಷ್ಪ ನಮನ ಸಲ್ಲಿಸಿ ದೀಪಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು, 21 ವರ್ಷ ಹಿಂದೆ ವರನಟ ಅಪರಣ ವಾದಾಗ ಹುಟ್ಟಿಕೊಂಡ ರಾಜಕುಮಾರ್ ಅವರ ಅಭಿಮಾನಿ ಸಂಘದ ಪತ್ರಿಕಾ ವರದಿಯ ದಾಖಲಾತಿಯನ್ನು ಪುನೀತ್ ರಾಜಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಈ ಹಿಂದೆ ನೀಡಿದ್ದೆವು ಎಂದು ನೆನಪಿಸಿಕೊಂಡರು. ಪುನೀತ್ ರಾಜ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ಅವರ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಕಣ್ಣು ದಾನ ಮಹತ್ವದ್ದಾಗಿದೆ. ಅಭಿಮಾನಿಗಳಿಗೂ ಪ್ರೇರಣೆಯಾಗಿದೆ
ಎಂದರು.

ಈ ಸಂದರ್ಭದಲ್ಲಿ ಕೃಷ್ಣ ಡೈಮಂಡ್ ನ ಮಾಲಕರಾದ ರವೀಂದ್ರ, ಗುರುರಾಜ್ ಎಮ್ ಶೆಟ್ಟಿ, ಸುಧೀರ್ ಶೇಟ್, ಸುನಿಲ್ ಶೇಟ್, ರಾಜೇಶ್ ಕಲ್ಮಾಡಿ, ಚಂದ್ರ ಗಾಣಿಗ, ಗಾಯಕ ಹರೀಶ್ ನಿಟ್ಟೂರ್ ಪ್ರಸನ್ನ ರಾಜ್ ಮಟ್ಟದಬೆಟ್ಟು, ಕಮಲಾಕರ್, ಭಾಸ್ಕರ್ ಮೆಂಡನ್, ಪ್ರಶಾಂತ್,ಮೇಸ್ತ್ರಿ ಶಿವಪ್ಪ, ಉಮೇಶ್, ಗೋಕುಲ್ ಕಾಮತ್, ದಿನೇಶ್ ನಾಯಕ್, ರಾಮಾನಾಥ್ ನಾಯಕ್, ಸುಧೀರ್ ಶೆಟ್ಟಿ ಬನ್ನಂಜೆ ಮೊದಲಾದವರು ಶ್ರದ್ಧಾಂಜಲಿ ಅರ್ಪಿಸಿದರು. ಹರೀಶ್ ಶೇರಿಗಾರ್ ನಿಟ್ಟೂರುರವರು ಪುನೀತ್ ರಾಜ್ ಕುಮಾರ್ ನಟಿಸಿ ಹಾಡಿದ ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಹಾಡನ್ನು ಹಾಡಿ. ನೆನಪಿಸಿಕೊಂಡರು. ಈ ಕಾರ್ಯಕ್ರಮವನ್ನು ಗಣೇಶ ಸರಳೇಬೆಟ್ಟು ನಿರ್ವಹಿಸಿ, ರಾಜೇಶ್ ಕಲ್ಮಾಡಿ ವಂದಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!