ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅವ್ರ ಪಾರ್ಥಿವ ಶರೀರದ ಮೆರವಣಿಗೆ ಬೆಳಿಗ್ಗೆ 6 ರಿಂದ ಶುರುವಾಗಲಿದ್ದು, 10.30ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ರಾಜ್ ಕುಟುಂಬದ ಆಪ್ತರಾದ ಸಾ.ರಾ ಗೋವಿಂದ್ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಪಾರ್ಥೀವ ಶರೀರದ ಮೆರವಣಿಗೆ ಆರಂಭವಾಗಲಿದೆ.
ಕೆಆರ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಮೂಲಕ, ಯಶವಂತಪುರ, ಆರ್ ಎಂ ಸಿ ಯಾರ್ಡ್, ಗೋರಗುಂಟೆಪಾಳ್ಯದ ಮೂಲಕ ಕಂಠೀರವ ಸ್ಟುಡಿಯೋವನ್ನು ತಲುಪಲಿದೆ. ಇನ್ನು ಬೆಳಿಗ್ಗೆ 10.30ರೊಳಗೆ ಕಂಠೀರವ ಸ್ಟುಡೀಯೋದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನೆರವೇರಿಲಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement. Scroll to continue reading.