ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ. ನಾಡಿನ ಶ್ರೀಮಂತ ಕಲೆ ಸಾಹಿತ್ಯ ಪರಂಪರೆಯಿಂದ ಜಗತ್ತಿನಲ್ಲಿ ನಮ್ಮ ನಾಡಿಗೆ ವಿಶೇಷ ಶ್ರೇಷ್ಠತೆ ನೀಡಿದೆ. ಕನ್ನಡ ಮನಸ್ಸು ಒಗ್ಗೂಡಿ ನೆಲ, ಜಲ ರಕ್ಷಣೆ ಮೂಲಕ ಕನ್ನಡ ಸೇವೆ ಮಾಡೋಣ ಎಂದು ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಹೇಳಿದರು. ಅವರು ಶಿರೂರು ಟೋಲ್ ಪ್ಲಾಜಾ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡಾಂಬೆಗೆ ಪುಷ್ಪಾರ್ಚನೆಗೈದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಸುರೇಶ ಬಟ್ವಾಡಿ, ಮಾಜಿ ತಾ.ಪಂ.ಸದಸ್ಯ ಪುಷ್ಪರಾಜ್ ಶೆಟ್ಟಿ, ಟೋಲ್ ವ್ಯವಸ್ಥಾಪಕ ಬೋಸ್ಲೆ, ದೇವದಾಜ್ ಮೇಸ್ತ, ದೀಪಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಾಜಿ ತಾ.ಪಂ.ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ವಂದಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.
Advertisement. Scroll to continue reading.



































