Connect with us

Hi, what are you looking for?

Diksoochi News

Uncategorized

ತೀರ ಹದಗೆಟ್ಟಿದೆ ಬೊಮ್ಮಾರಬೆಟ್ಟು ಗ್ರಾಮದ ರಸ್ತೆ; ಕುಸಿದು ಬೀಳುವಂತಿದೆ ಕಿರು ಸೇತುವೆ; ದುರಸ್ಥಿ ಕಾರ್ಯ ಎಂದು?

0

ಹಿರಿಯಡಕ : ಉಡುಪಿ ಜಿಲ್ಲೆಯ ಬೊಮ್ಮಾರಬೆಟ್ಟು ಗ್ರಾಮದ ಗುಡ್ಡೆಂಗಡಿ ಮಾರ್ಗವಾಗಿ ಹಿರಿಯಡ್ಕವನ್ನು ಸಂಪರ್ಕಿಸುವ ಒಳದಾರಿ ಪಾಲೆಮಾರು ರಸ್ತೆಯು ತೀರ ಹದಗೆಟ್ಟು ಹೋಗಿದೆ. ಇಲ್ಲಿನ ಕಿರುಸೇತುವೆ ಯೊಂದು ಆಗಲೋ ಈಗಲೋ ಕುಸಿದು ಬೀಳುವ ಹಂತದಲ್ಲಿದ್ದು ಜನರು ತಮ್ಮ ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ.

ಆರಂಭದಲ್ಲಿ ಸಣ್ಣ ಮಟ್ಟದ ಬಿರುಕು ಕಂಡಿದ್ದು ಮಣ್ಣು ತುಂಬಿದಂತೆ ಸರಿ ಹೋಗುತ್ತಿತ್ತು. ಆದರೆ ಈ ವರ್ಷ ಸ್ಥಳೀಯರ ಯಾವ ಪ್ರಯತ್ನಕ್ಕೂ ಜಗ್ಗದ ಸೇತುವೆ ತನ್ನ ತೆರೆದ ಬಾಯಿಯನ್ನು ಇನ್ನಷ್ಟು ಅಗಲಗೊಳಿಸುತ್ತಲೇ ಹೋಗುತ್ತಿದೆ. ಈ ಮಾರ್ಗವಾಗಿ ಪ್ರತಿನಿತ್ಯ ಅನೇಕ ವಿದ್ಯಾರ್ಥಿಗಳು, ಉದ್ಯೋಗಸ್ಥರು ನಡೆದುಕೊಂಡೋ ಇಲ್ಲ ತಮ್ಮ ವಾಹನಗಳ ಮೂಲಕವೋ ಓಡಾಡುತ್ತಲೇ ಇರುತ್ತಾರೆ. ಹಾಗಾಗಿ ಈ ವಿಭಾಗದಲ್ಲಿ ಅತ್ಯಧಿಕ ವಾಹನ ಸಂಚಾರ ಇದ್ದು ಸೇತುವೆಯು ಕುಸಿದು ಹೋದಲ್ಲಿ ನಿತ್ಯ ಸಂಚಾರಿಗಳು ತೊಂದರೆಗೊಳಗಾಗುವರು. ಅದೂ ಅಲ್ಲದೆ ಅಪಾಯಕ್ಕೆ ಆಹ್ವಾನ ನೀಡುವಂತಿರುವ ಸೇತುವೆ ಸಂಚಾರದ ಅನುಭವ ಹೇಳತೀರದು. ಇಷ್ಟಾಗಿಯೂ ಇದೇ ಮಾರ್ಗವಾಗಿ ಸಾಗುವ ಭಾರೀ ಗಾತ್ರದ ವಾಹನಗಳ ಸಂಖ್ಯೆ ಕಡಿಮೆಯಾಗಿಲ್ಲ.

ಏನಾದರೂ ಅಪಾಯ, ಅವಘಡಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟರು ಎಚ್ಚೆತ್ತು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!