ಮಲ್ಪೆ ಕಡಲ ತೀರದಲ್ಲಿ ಅರಳಿದೆ ಪುನೀತ್ ರಾಜ್ ಕುಮಾರ್ ನಗು; ರೂಬಿಕ್ಸ್ ಕ್ಯೂಬ್ ನಿಂದ ಅದ್ಭುತ ಕಲಾಕೃತಿ ರಚಿಸಿದ ಅಪ್ಪು ಅಭಿಮಾನಿ
Published
0
ಮಲ್ಪೆ : ಕರುನಾಡ ಕಣ್ಮಣಿ ನಟ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 12 ದಿನ. ಅವರ ಹೆಸರಿನಲ್ಲಿ ನೇತ್ರದಾನ, ರಕ್ತದಾನ, ಅನ್ನದಾನಗಳು ನಡೆಯುತ್ತಿವೆ. ಕರಾವಳಿಯಲ್ಲೂ ಅಪ್ಪುವಿಗೆ ನಮಿಸಲಾಗುತ್ತಿದೆ. ಈ ನಡುವೆ ಇಂದು ಮಲ್ಪೆ ಕಡಲ ತೀರದಲ್ಲಿ ಅಪ್ಪು ಅವರ ಅದ್ಭುತ ಕಲಾಕೃತಿ ಅನಾವರಣಗೊಂಡಿದೆ.
ಹೌದು, ಅಪ್ಪು ಮಲ್ಪೆ ಬೀಚ್ ಗೆ ಭೇಟಿ ಕೊಡುತ್ತಿದ್ದ ಸವಿನೆನಪುಗಳಿವೆ. ಈ ನೆನಪನ್ನು ಮತ್ತಷ್ಟು ನೆನಪಿಸುವಂತೆ ಕಲಾವಿದ ಮಹೇಶ್ ಮಲ್ಪೆ ಮತ್ತೆ ಅಪ್ಪು ನಗುವನ್ನು ಸಮುದ್ರ ತೀರದಲ್ಲಿ ಸೃಷ್ಟಿಸಿದ್ದಾರೆ. 704 ರೂಬಿಕ್ಸ್ ಕ್ಯೂಬ್ ಬಳಸಿ ಅದ್ಭುತ ಕಲಾಕೃತಿ ರಚಿಸಿದ್ದಾರೆ. ಇದು ಅಪ್ಪು ಅಭಿಮಾನಿಗಳು, ಪ್ರವಾಸಿಗರನ್ಬು ಹರ್ಷಚಿತ್ತರನ್ನಾಗಿಸಿದೆ.