ಪಟ್ಲ : ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಚಿತ್ರ ಕಲಾಶಲೆ ಜಂಗಮ ಮಠ ಉಡುಪಿ ಹಾಗೂ ಯು.ಎಸ್ ನಾಯಕ್ ಪ್ರೌಢಶಾಲೆ ಪಟ್ಲ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಯು.ಎಸ್.ನಾಯಕ್ ಪಟ್ಲ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು.
ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ ಪ್ರಭು ಇವರು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಕಲಾವಿದನ ಕಲ್ಪನೆಗೆ ಮೂರ್ತ ರೂಪ ಕೊಡುವ ಒಂದು ಸಶಕ್ತ ಕಲಾಪ್ರಕಾರ ಚಿತ್ರಕಲೆ. ಆಸಕ್ತಿ ಇರುವ ಮಕ್ಕಳು ನಿರಂತರ ಅಭ್ಯಾಸದೊಂದಿಗೆ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರೆ ಅವರಿಗೆ ಉತ್ತಮ ಭವಿಷ್ಯವಿದೆ ಎಂದರು.

ಚಿತ್ರಕಲಾ ಶಿಕ್ಷಕ ಸದಾನಂದ ಪಂಚನಬೆಟ್ಟು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಹಿರಿಯ ಶಿಕ್ಷಕ ಎಚ್.ಎನ್.ನಟರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Advertisement. Scroll to continue reading.



































