ನವದೆಹಲಿ: ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಅವರಿಗೆ ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂಬ ಸುದ್ದಿಗಳು ಸಂಜೆಯಿಂದ ಹರಿದಾಡಿದ್ದವು. ಈ ಬಗ್ಗೆ ಸ್ವತಃ ನಿಶಾ ಸ್ಪಷ್ಟನೆ ನೀಡಿದ್ದಾರೆ. ತಾನು ಸುರಕ್ಷಿತವಾಗಿರುವುದಾಗಿ ವಿಡಿಯೋ ರಿಲೀಸ್ ಮಾಡಿರುವ ನಿಶಾ ದಹಿಯಾ, ನಾನು ಸೀನಿಯರ್ ನ್ಯಾಷನಲ್ ಮೀಟ್ ಗಾಗಿ ಉತ್ತರ ಪ್ರದೇಶದ ಗೊಂಡಾಗೆ ಬಂದಿದ್ದೇನೆ ಎಂದಿದ್ದಾರೆ.
ಸೋನಿಪತ್ ನಲ್ಲಿರುವ ಸುಶೀಲ್ ಕುಮಾರ್ ಕುಸ್ತಿ ತರಬೇತಿ ಅಕಾಡೆಮಿಯಲ್ಲಿ ನಿಶಾ ದಹಿಯಾ ಮತ್ತು ಆಕೆಯ ಸಹೋದರ ಸೂರಜ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನಲಾಗಿತ್ತು.
Advertisement. Scroll to continue reading.