ಬ್ರಹ್ಮಾವರ : ನೀಲಾವರ ಗೋಶಾಲೆಗೆ ಗೋಗ್ರಾಸ ನೀಡಿದ ರಾಘವೇಂದ್ರ ಕುಂದರ್ ಗೆ ಅಭಿನಂದನೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಬ್ರಹ್ಮಾವರ ಪ್ರಖಂಡದ ವತಿಯಿಂದ ನೀಲಾವರ ಗೋಶಾಲೆಗೆ ಗೋಪೂಜೆ ಸಮಯದಲ್ಲಿ ನೀಲಾವರ ಗೋಶಾಲೆಗೆ 4, 000 ಕೆ.ಜಿ ಗೋಗ್ರಾಸವನ್ನು ನೀಡಿದ ವಿಹಿಂಪ, ಬಜರಂಗ ದಳ ಬ್ರಹ್ಮಾವರ ಪ್ರಖಂಡದ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ.ಬಿ. ಅವರಿಗೆ ಗೋವಿನ ಸೇವೆ ಮಾಡಿದ್ದಕ್ಕಾಗಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬ್ರಹ್ಮಾವರ ಪ್ರಖಂಡದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ನೀಲಾವರ ಗೋಶಾಲೆಯಲ್ಲಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬ್ರಹ್ಮಾವರ ಪ್ರಖಂಡದ ನಾನಾ ಪ್ರಮುಖರು ಉಪಸ್ಥಿತರಿದ್ದರು.