Connect with us

Hi, what are you looking for?

Diksoochi News

ಕರಾವಳಿ

ಅಮೃತ ಗ್ರಾಮ ಯೋಜನೆಗೆ ಅಂಪಾರು ಗ್ರಾಪಂ ಆಯ್ಕೆ; ಈಗಾಗಲೇ 400 ರಷ್ಟು ಅರ್ಜಿಗಳು ಬಂದಿವೆ : ಕೆ.ಅಶೋಕ್

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಅಂಪಾರು ಗ್ರಾಪಂ ನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ್ದಾರೆ. ಇದೀಗ ಅಂಪಾರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಕಾರ್ಯ ನೋಡಿ ಅಮೃತ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ. 2,3 ವರ್ಷದಿಂದ ಪಂಚಾಯಿತಿಗೆ ಯಾವುದೇ ವಸತಿ ಯೋಜನೆ ಬಂದಿಲ್ಲ. ಈಗಾಗಲೇ 400 ರಷ್ಟು ಅರ್ಜಿಗಳು ಬಂದಿವೆ ಎಂದು ಅಂಪಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ಅಶೋಕ್ ಹೇಳಿದರು.

ಕೆ.ಅಶೋಕ್, ಉಪಾಧ್ಯಕ್ಷ

ಗ್ರಾಪಂ 4,980 ಜನ ಸಂಖ್ಯೆಯನ್ನು ಹೊಂದಿದೆ. 1221 ಕುಟುಂಬಗಳು ವಾಸ್ತವ್ಯವಿದೆ. ವಸತಿ ಯೋಜನೆಗೆ ಬಂದಿರುವ ಅರ್ಜಿಯ ಮೇರೆಗೆ ಖಾಲಿ ಜಾಗಗಳಿಗೆ ಜಿಪಿಎಸ್ ಅಳವಡಿಸುವ ಕೆಲಸವನ್ನು ಪಂಚಾಯತ್ ಸಿಬ್ಬಂದಿಗಳು ಮಾಡಿದ್ದಾರೆ. 10-15 ದಿನಗಳಲ್ಲಿ ಯೋಜನೆ ಪಂಚಾಯತಿಗೆ ಬರಲಿದೆ. ಎಷ್ಟು ಮನೆಬೇಕೋ ಅಷ್ಟು ಮನೆ ನಿರ್ಮಿಸುವ ಬಗ್ಗೆ ತಾಲೂಕು ಪಂಚಾಯತ್ ಸಮೀಕ್ಷೆ ಮಾಡಿ, ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಆ ವರದಿಯ ಮೇಲೆ ಮನೆಗಳು ಮಂಜೂರಾಗುತ್ತದೆ. ಹಂತ ಹಂತವಾಗಿ ಬೇರೆ ಬೇರೆ ಯೋಜನೆಗಳಲ್ಲಿ ವಸತಿ ರಹಿತರಿಗೆ ವಸತಿ ಯೋಜನೆಯಡಿ ಮನೆ ಮಂಜೂರು ಮಾಡುತ್ತೇವೆ. ಈ ಯೋಜನೆ ನೀಡುವಲ್ಲಿ ಕಾರಣೀಭೂತರಾದ ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ಧನ್ಯವಾದಗಳು ಎಂದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!