ನವದೆಹಲಿ: ಭಾರತದಲ್ಲಿ LGBTQ+ ಚಳುವಳಿಯ ಪ್ರಮುಖ ಮೈಲಿಗಲ್ಲಿನಲ್ಲಿ, ದೇಶವು ಅಂತಿಮವಾಗಿ ಸಾಂವಿಧಾನಿಕ ನ್ಯಾಯಾಲಯದ ಅಧ್ಯಕ್ಷತೆ ವಹಿಸುವ ನ್ಯಾಯಾಧೀಶರನ್ನಾಗಿ ಸಲಿಂಗಕಾಮಿಯೊಬ್ಬರನ್ನು ನೇಮಕ ಮಾಡಲಾಗಿದೆ. ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ.
ಈ ಮೂಲಕ ಭಾರತದ ಮೊದಲ ಸಲಿಂಗಕಾಮಿ ನ್ಯಾಯಾಧೀಶರಾಗಿದ್ದಾರೆ ಸೌರಭ್ ಕಿರ್ಪಾಲ್. ನವೆಂಬರ್ 11 ರಂದು ಕೊಲಿಜಿಯಂ ಸಭೆಯಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
Advertisement. Scroll to continue reading.