ಡಾರ್ಲಿಂಗ್ ಕೃಷ್ಣ ಶುಗರ್ ಫ್ಯಾಕ್ಟರಿ ಚಿತ್ರ ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರದ ಕುರಿತು ಒಂದಲ್ಲಾ ಒಂದು ವಿಚಾರವಾಗಿ ಸುದ್ದಿ ಮಾಡುತ್ತಿದೆ. ಈಗಾಗಲೇ ಈ ಚಿತ್ರಕ್ಕೆ ಕೋಸ್ಟಲ್ವುಡ್ ಬೆಡಗಿ ಸೋನಾಲ್ ಮೊಂತೆರೋ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ತುಳು ನಾಡಿನವರೇ ಆದ ಅದ್ವಿತಿ ಶೆಟ್ಟಿ ಸೇರಿಕೊಂಡಿದ್ದರು. ಇದೀಗ ಮತ್ತೊಬ್ಬ ಕರಾವಳಿ ಬೆಡಗಿ ಸರದಿ. ಅವರೇ ಶಿಲ್ಪ ಶೆಟ್ಟಿ. ಬಾಲಿವುಡ್ ಶಿಲ್ಪಾ ಶೆಟ್ಟಿ ಅಂತ ಅಂದ್ಕೊಂಡ್ರಾ…ಅಲ್ಲಾ ಕಣ್ರೀ ಇವರು ಕೋಸ್ಟಲ್ವುಡ್ ಬೆಡಗಿ ಶಿಲ್ಪಾ ಶೆಟ್ಟಿ.
ಕನ್ನಡ ಧಾರಾವಾಹಿ ಹಾಗೂ ತುಳು ಚಿತ್ರ ಗಿರ್ಗಿಟ್ನಲ್ಲಿ ನಟಿಸಿದ್ದಾರೆ ಶಿಲ್ಪಾ ಶೆಟ್ಟಿ. ಅಂದಹಾಗೆ, ಮನಸಾಲಜಿ ಚಿತ್ರ ನಿರ್ದೇಶಿಸಿದ್ದ ದೀಪಕ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
Advertisement. Scroll to continue reading.

In this article:DarlingKrishna, Diksoochinews, sandalwoodnews, Shilpashetty, SugarFactory

Click to comment