Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಸ್ಪೋರ್ಟ್ಸ್ ಕ್ಲಬ್ ನ ಈಜುಕೊಳ, ಬಯಲು ರಂಗ ಮಂಟಪ, ಪ್ರವೇಶ ದ್ವಾರ ಉದ್ಘಾಟನೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ಗ್ರಾಮೀಣ ಭಾಗದ ಕ್ರೀಡಾ ಪಟುಗಳನ್ನು ಸಿದ್ದಗೊಳಿಸುವ ಹಿನ್ನೆಲೆಯಲ್ಲಿ 2005 ರಲ್ಲಿ ಕೇವಲ 11 ಮಂದಿ ಕ್ರೀಡಾ ಮನೋಭಾವದ ಸಮಾನ ಮನಸ್ಕರಿಂದ ಆರಂಭಗೊಂಡ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಇಂದು ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಿಗೆ ಸ್ಫರ್ಧಿಸುವ ಕ್ರೀಡಾಳುಗಳನ್ನು ತರಬೇತಿಗೊಳಿಸುವ ಕ್ರೀಡಾ ಸಂಸ್ಥೆಯಾಗಿ ಸಿದ್ಧಗೊಂಡಿದೆ ಎಂದು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೈ ಚಂದ್ರ ಶೇಖರ ಹೆಗ್ಡೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಆರಂಭದಲ್ಲಿ ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜಿನಲ್ಲಿ ಕಾರ್ಯಾಚರಿಸುತ್ತಿದ್ದ ಕ್ಲಬ್ ಇಂದು ನಾಡಿನ ಅನೇಕ ಕ್ರೀಡಾ ಪಟುಗಳು ಮತ್ತು ದಾನಿಗಳ ನೆರವಿನಿಂದ ಹೆರಂಜೆಯ ಬಳಿ 3 ಎಕ್ರೆ ಜಾಗವನ್ನು ಖರೀದಿಸಿ ಸ್ವಂತ ಕ್ರೀಡಾಂಗಣವನ್ನು ನಿರ್ಮಿಸಿದೆ.
ಈಗಾಗಲೆ 2 ಸುಸಜ್ಜಿತ ಟೆನಿಸ್ ಒಳಾಂಗಣ ಮತ್ತು ಹೊರಾಂಗಣದಲ್ಲಿ ಶಟ್ಲ್ , ಕೇರಂ , ಚೆಸ್ ಮತ್ತು ಹಾರ್ಡ್ ಬಾಲ್ ಕ್ರೀಕೆಟ್‍ನಲ್ಲಿ ತರಬೇತಿ ಪಡೆದವರು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಜಯವನ್ನು ಗಳಿಸಿದ್ದಾರೆ.

ಉಡುಪಿ ಶಾಸಕ ಕೆ .ರಘುಪತಿ ಭಟ್ ಅಧ್ಯಕ್ಷತೆಯ ಸಮಾರಂಭದಲ್ಲಿ ನೂತನವಾಗಿ ಸಿದ್ಧಗೊಂಡ ಕ್ರೀಡಾ ಕ್ಲಬ್ ಸದಸ್ಯ ದಿವಂಗತ ಬೈಕಾಡಿ ಸಲ್ವಾದೋರ್ ನೋರೋನ್ಹಾ ಸ್ಮಾರಕ ಮಿನಿ ಒಲಿಂಪಿಕ್ ಈಜುಕೊಳವನ್ನು ಸಚಿವ ವಿ.ಸುನಿಲ್ ಕುಮಾರ್, ಶ್ರೀಮತಿ ಅರುಣಾ ಸುದರ್ಶನ್ ಹೆಗ್ಡೆ ಬಯಲು ರಂಗಮಂಟಪವನ್ನು, ಡಾ.ಮೋಹನ್ ಆಳ್ವ, ಹಂದಾಡಿ ಸಿರಿಲ್ ಅಬ್ರಹಾಂ.ಡಿ’ಸೋಜ ಸ್ಮಾರಕ ಪ್ರವೇಶದ್ವಾರವನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ಭಾನುವಾರ ಸಂಜೆ ಗಂಟೆ 5ಕ್ಕೆ ಲೋಕಾರ್ಪಣೆಗೆ ಸಿದ್ದಗೊಂಡಿದೆ.

ಗ್ರಾಮೀಣ ಬಡ ಕ್ರೀಡಾಪಟುಗಳನ್ನು ಗುರುತಿಸಿ ಉಚಿತವಾಗಿ ಕ್ರೀಡಾ ತರಬೇತಿ ನೀಡುವುದು ಮತ್ತು ಅವರ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ನೀಡುವುದು ಜೊತೆಗೆ ಕಲಾಸಕ್ತರನ್ನು ಗುರುತಿಸಿ ಗೌರವಿಸುವ ಈ ಕ್ರೀಡಾ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಆಳ್ವಾಸ್ ನ ಏಕಲವ್ಯ ಪ್ರಶಸ್ತಿ , ಜಿಲ್ಲೆ ಮತ್ತು ರಾಜ್ಯದ ಪ್ರಶಸ್ತಿ ಲಭಿಸಿದೆ ಎಂದರು. ಕಾರ್ಯದರ್ಶಿ ಗ್ರೇಗರಿ ಡಿ’ಸಿಲ್ವ ಮತ್ತು ಪ್ರಸನ್ನ ಶೆಟ್ಟಿ ಗೋಷ್ಠಿಯಲ್ಲಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!