Connect with us

Hi, what are you looking for?

Diksoochi News

ಕರಾವಳಿ

ಕುಸಿಯುವ ಭೀತಿಯಲ್ಲಿ ಆಗುಂಬೆ ಘಾಟಿ ರಸ್ತೆ: ಆತಂಕದಲ್ಲಿ ಜನರು

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಕರಾವಳಿ ಭಾಗವನ್ನು ಹಾಗೂ ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಈಗ ಕುಸಿಯುವ ಭೀತಿಯಲ್ಲಿದೆ. ವಾಹನದಲ್ಲಿ ಪ್ರಯಾಣಿಸುವ ಜನರು ಆತಂಕದಲ್ಲಿದ್ದಾರೆ.
ಹೆಬ್ರಿ ಆಗುಂಬೆ ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ವಿಪರೀತ ಮಳೆಯಾಗುತ್ತಿದೆ. ಇದರಿಂದ ಘಾಟಿಯ ಮಣ್ಣು ಸಡಿಲಗೊಂಡಿದ್ದು ರಸ್ತೆ ಕುಸಿಯಲು ಕಾರಣವಾಗಿದೆ. ಗುರುವಾರ ಆಗುಂಬೆ ಘಾಟಿಯ ಹನ್ನೆರಡು ಮತ್ತು ಹದಿಮೂರನೇ ತಿರುವಿನ ಮಧ್ಯದಲ್ಲಿ ರಸ್ತೆ ಕುಸಿದಿದ್ದು, ಯಾವ ಸಮಯದಲ್ಲಿ ಬೇಕಾದ್ರೂ ಇನ್ನೂ ಹೆಚ್ಚಿನ ಕುಸಿತ ಸಂಭವಿಸಬಹುದು ಎಂದು ಸ್ಥಳೀಯರು ಹೇಳುತ್ತಾರೆ.


2 ವರ್ಷದ ಹಿಂದೆ ಘಾಟಿಯ ಹಲವು ಕಡೆ ರಸ್ತೆ ಕುಸಿದು ಸುಮಾರು 1ತಿಂಗಳ ಕಾಲ ಸಂಪರ್ಕ ಬಂದ್ ಆಗಿತ್ತು. ಈ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದುದರಿಂದ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!