Connect with us

Hi, what are you looking for?

Diksoochi News

ರಾಷ್ಟ್ರೀಯ

ಮದುವೆ ಮೆರವಣಿಗೆ ಡಿಜೆ ಸೌಂಡ್ಸ್ ಗೆ 63 ಕೋಳಿಗಳು ಸಾವು; ಪೊಲೀಸ್ ಠಾಣೆಗೆ ದೂರು ನೀಡಿದ ಮಾಲೀಕ

0

ಒಡಿಶಾ : ವಿವಾಹದ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಸಂಗೀತದಿಂದ ನನ್ನ ಕೋಳಿ ಸಾವನ್ನಪ್ಪಿದ್ದಾವೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸ್‌ ಠಾಣೆಗೆ ದೂರು ನೀಡಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ಕಂದಗರಡಿ ಗ್ರಾಮದಲ್ಲಿ ನಡೆದಿದೆ.

ಕಂದಗರಡಿ ಗ್ರಾಮದ ನಿವಾಸಿ, ಕೋಳಿ ಫಾರಂ ಮಾಲೀಕ ರಂಜಿತ್ ಪರಿದಾ ದೂರು ನೀಡಿರುವ ವ್ಯಕ್ತಿ. ತಮ್ಮ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆಯ ಮೆರವಣಿಗೆಯಲ್ಲಿ ಬಳಸಿದ ಡಿಜೆ ಸೌಂಡ್ಸ್ ನಿಂದ ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶನಿವಾರ ರಾತ್ರಿ ಡಿಜೆ ಬ್ಯಾಂಡ್ ಸೌಂಡ್ ನೊಂದಿಗೆ ಮದುವೆ ಮೆರವಣಿಗೆ ತಮ್ಮ ಕೋಳಿ ಫಾರ್ಮ್ ಸಮೀಪದಿಂದಲೇ ಹಾದು ಹೋಗಿದ್ದು, ಡಿಜೆ ಬ್ಯಾಂಡ್ ಫಾರ್ಮ್ ಬಳಿ ಬಂದಾಗ, ಕೋಳಿಗಳು ಗಾಬರಿಗೊಂಡು ಹಾರಲು ಆರಂಭಿಸಿದ್ದಾವೆ. ನಂತರ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿದವು ಎಂದು ಅವರು ದೂರಿದ್ದಾರೆ.

Advertisement. Scroll to continue reading.

ಡಿಜೆ ಸೌಂಡ್ಸ್ ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡರೂ ಕೇಳಲಿಲ್ಲ. ಭಾರೀ ಶಬ್ದದ ಪರಿಣಾಮ 63 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪುವಂತಾಗಿದೆ ಎಂದು ರಂಜಿತ್ ಅಲವತ್ತುಕೊಂಡಿದ್ದಾರೆ. ಕೋಳಿಗಳನ್ನು ಪರೀಕ್ಷಿಸಿದ ಪಶುವೈದ್ಯಾಧಿಕಾರಿ ಕೂಡಾ ಭಾರೀ ಶಬ್ದದ ಶಾಕ್ ನಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!