ಬೆಂಗಳೂರು : 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಲಾಗಿದೆ. ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದೆ. ಡಿ.30 ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ನಾಮ ಪತ್ರ ಸಲ್ಲಿಸಲು ಡಿ.8 ರಿಂದ ನಾಮ ಪತ್ರ ಸಲ್ಲಿಸಬಹುದಾಗಿದ್ದು, ಡಿ.15 ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
209 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದೆ. 4 ನಗರಸಭೆ, 19 ಪುರಸಭೆ, 35 ಪಟ್ಟಣ ಪಂಚಾಯಿತಿಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.
ಚುನಾವಣೆ ಹಿನ್ನೆಲೆ ಡಿಸೆಂಬರ್ 8 ರಿಂದ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Advertisement. Scroll to continue reading.