ಮುಂದಿನ ಎರಡು ವಾರಗಳಲ್ಲಿ ಕೋವಿಡ್-19 ಲಸಿಕೆಗಳ ಹೆಚ್ಚುವರಿ ಮತ್ತು ಬೂಸ್ಟರ್ ಡೋಸ್ ಗಳ ಬಗ್ಗೆ ಭಾರತ ತನ್ನ ನೀತಿಯನ್ನ ಅನಾವರಣಗೊಳಿಸಲಿದೆ. ಜೊತೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 44 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಸಮಗ್ರ ಯೋಜನೆ ಶೀಘ್ರದಲ್ಲೇ ತರಲಾಗುವುದು ಎಂದು ಭಾರತದ ಕೋವಿಡ್-19 ಕಾರ್ಯಪಡೆಯ ಮುಖ್ಯಸ್ಥ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ.
ಕೋವಿಡ್-19 ರ ಹೆಚ್ಚುವರಿ ಮತ್ತು ಬೂಸ್ಟರ್ ಡೋಸ್ ಗಳ ಬಗ್ಗೆ ಸಮಗ್ರ ನೀತಿಯನ್ನು ಮುಂದಿನ 2 ವಾರಗಳಲ್ಲಿ ಭಾರತದ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಬಹಿರಂಗಗೊಳಿಸಲಿದೆ.
ಮಕ್ಕಳಿಗೆ ಲಸಿಕೆ ನೀಡುವ ವಿಚಾರವಾಗಿ, ಲಸಿಕೆಗಾಗಿ ಕೋಮೊರ್ಬಿಡಿಟಿ ಹೊಂದಿರುವ ಮಕ್ಕಳಿಗೆ ಆದ್ಯತೆ ನೀಡುವ ನೀತಿಯನ್ನ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 44 ಕೋಟಿ ಮಕ್ಕಳಿಗೆ ಲಸಿಕೆ ಹಾಕುವ ಸಮಗ್ರ ಯೋಜನೆಯನ್ನು ಶೀಘ್ರದಲ್ಲೇ ಬಹಿರಂಗಗೊಳಿಸಲಾಗುವುದು. ಕೊಮೊರ್ಬಿಡಿಟಿ ಹೊಂದಿರುವ ಮಕ್ಕಳಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಬಳಿಕ ಆರೋಗ್ಯವಂತ ಮಕ್ಕಳಿಗೆ ಲಸಿಕೆ ನೀಡಲು ಆದ್ಯತೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅರೋರಾ ತಿಳಿಸಿದ್ದಾರೆ.
