ಚಂದನವನ : ಹಿರಿಯ ನಟ ಶಿವರಾಂ ಅವರು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡುವ ವೇಳೆ ಅವರು ಬಿದ್ದಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಮೆದುಳು ನಿಷ್ಕ್ರಿಯಗೊಂಡು ಕೋಮ ಸ್ಥಿತಿಯಲ್ಲಿದ್ದರು. ಇಂದು ವಿಧಿವಶರಾಗಿದ್ದಾರೆ.
ನಟ ಶಿವರಾಂ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಅಮೋಘ ನಟನೆಯಿಂದ ಜನಮನಸೂರೆಗೊಂಡಿದ್ದರು.
ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಅವರು, ಬೆರೆತ ಜೀವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಪುಟ್ಟಣ ಕಣಗಾಲ್ ನಿರ್ದೇಶನದ ಶರಪಂಜರ, ನಾಗರಹಾವು, ಶುಭಮಂಗಳ ಚಿತ್ರಗಳಲ್ಲಿ ಗಮನಾರ್ಹ ಪಾತ್ರ ಮಾಡಿದ್ದರು. ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸಬೆಳಕು, ಗುರು ಶಿಷ್ಯರು, ಸಿಂಹದ ಸೈನ್ಯ, ಮಕ್ಕಳ ಸೈನ್ಯ, ಆಪ್ತಮಿತ್ರ ಚಿತ್ರಗಳಲ್ಲಿ ಪಾತ್ರರಾಗಿದ್ದಾರೆ.

1972 ರಲ್ಲಿ ತೆರೆಕಂಡ ಡಾ. ರಾಜ್ ಕುಮಾರ್ ಅಭಿನಯದ ಹೃದಯ ಸಂಗಮ ಚಿತ್ರವನ್ನು ನಿರ್ದೇಶಿಸಿದ್ದರು.ಗೆಜ್ಜೆ ಪೂಜೆ, ಉಪಾಸನೆ, ನಾನೊಬ್ಬ ಕಳ್ಳ, ಡ್ರೈವರ್ ಹನುಮಂತು, ಧರ್ಮ ದುರೈ(ತಮಿಳು), ಬಹಳ ಚೆನ್ನಾಗಿದೆ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.