ವರದಿ : ದಿನೇಶ್ ರಾಯಪ್ಪನಮಠ
ಕೋಟ: ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಬಾರಕೂರು ಸಂಸ್ಥಾನದ ಭೂತಾಳಪಾಂಡ್ಯನ ಆಳ್ವಿಕೆಯಲ್ಲಿ ಪ್ರತಿಷ್ಟೆಗೊಂಡ ಶ್ರೀ ಶಂಕರನಾರಾಯಣ ದೇವಸ್ಥಾನ ತೀರ್ಥಬೈಲು ಪಾಂಡೇಶ್ವರ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಶನಿವಾರ ಜರಗಿತು.

ಮಹಾಭಾರತ ಭೀಮನ ಗದೆಯ ಮೂಲಕ ನಿರ್ಮಿತವಾದ ತೀರ್ಥಬೈಲು ಪವಿತ್ರ ಪುಷ್ಕರಣಿ ಸುತ್ತಲು ಹಣತೆಗಳ ಸಾಲು ಭಕ್ತಮಹಾಶಯರನ್ನು ವಿಶೇಷವಾಗಿ ಆಕರ್ಷಿಸಿತು. ದೇವಳದ ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿ.ಮಿ ವರೆಗೆ ಎರಡು ದಿಕ್ಕುಗಳಲ್ಲಿ ಹಣತೆ ಪ್ರಜ್ವಲಿಸಿತು.

ಸುಮಾರು 10ಸಾವಿರಕ್ಕೂ ಅಧಿಕ ಹಣತೆಗಳು ಬೆಳಕಿನಲ್ಲಿ ಕಂಗೊಳಿಸಿತು. ರಾಘವೇಂದ್ರ ಭಜನಾ ತಂಡ ಪಾಂಡೇಶ್ವರ ಇವರಿಂದ ಭಜನಾ ಕಾರ್ಯಕ್ರಮ ಮತ್ತು ರಂಗಪೂಜಾಧಿ ವಿವಿಧಿ ಧಾರ್ಮಿಕ ಕಾರ್ಯಕ್ರಮಗಳು, ಪನ್ಯಾರ ಪ್ರಸಾದ ವಿತರಣೆ ನಡೆಯಿತು.
ರಘರಾಮ್ ಭಟ್ ನೇತ್ರತ್ವದಲ್ಲಿ , ದೇವಳದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ದೀಪೋತ್ಸವ ಸಂಪನ್ನಗೊಂಡಿತು.
Advertisement. Scroll to continue reading.

In this article:Diksoochi news, diksoochi udupi, diksoochitv, shankarnarayana Temple
Click to comment

































