Connect with us

Hi, what are you looking for?

Diksoochi News

ಕರಾವಳಿ

ಶ್ರೀ ಕ್ಷೇತ್ರ ದಶಾವತಾರ ಮೇಳ ಪ್ರಥಮ ಸೇವೆಯಾಟ – ಕೋಟ ವೈಕುಂಠ ಯಕ್ಷಕಿನ್ನರ ಹಾಗೂ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ ಪ್ರದಾನ ಸಮಾರಂಭ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಕಲಾವಿದರು ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆ ಕಟ್ಟಿದ ಇತಿಹಾಸ ಹೆಚ್ಚು ಅದರಲ್ಲಿ ಚಿಟ್ಟಾಣಿಯಂತಹ ಕಲಾವಿದರು ಸರ್ವಶ್ರೇಷ್ಠತೆ ಹೊಂದಿ ಕಲಾಸ್ಪೂರ್ತಿಯಾಗಿ ಬೆಳಗಿದ್ದಾರೆ ಎಂದು ಯಕ್ಷ ಚಿಂತಕ ಎಚ್ ಸುಜಯೀಂದ್ರ ಹಂದೆ ಹೇಳಿದರು.


ಶ್ರೀ ಕ್ಷೇತ್ರ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ವತಿಯಿಂದ ನಡೆಸಲ್ಪಡುವ ದಶಾವತಾರ ಯಕ್ಷಗಾನ ಮಂಡಳಿ ಇದರ ೨೦೨೧-೨೧ರ ಪ್ರಥಮ ಸೇವೆಯಾಟ ಭಾನುವಾರ ಶ್ರೀ ಕ್ಷೇತ್ರದಲ್ಲಿ ಆಯೋಜಿಸಲಾದ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಹಾಗೂ ಕೋಟ ವೈಕುಂಠ ಯಕ್ಷಕಿನ್ನರ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿ ಯಕ್ಷಗಾನದ ಗುರುಗಳ ಸಾಲಿನಲ್ಲಿ ಭಾಗವತ ನಾರಾಯಣಪ್ಪ ಉಪ್ಪೂರ ಹಾಗೂ ಕೋಟ ವೈಕುಂಠರ ಕೊಡುಗೆ ಅನನ್ಯ,ಕಲಾ ಸಾಧಕರಾಗಿ ಇತರ ಕಲಾವಿದರಿಗೆ ಗುರುಸ್ಥಾನದಲ್ಲಿ ಕಂಗೊಳಿಸಿದ್ದಾರೆ. ಹೆಚ್ಚಿನ ಕಲಾವಿದರು ಸಮಾಜದ ಸ್ವಾಸ್ಥ÷್ಯ ಕಾಪಾಡುವುದರ ಜೊತೆಗೆ ಕಲೆಯ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿಗಿನ ಕಾಲಘಟ್ಟದಲ್ಲಿ ರಂಗ ಸ್ಥಳದಲ್ಲಿ ಅಪಹಾಸ್ಯಗಳನ್ನು ಸೃಷ್ಠಿಸುವ ಮನಸ್ಥಿತಿ ಸೃಷ್ಠಿಯಾಗುತ್ತಿದೆ, ಇದು ಆರೋಗ್ಯಕರ ಬೆಳವಣಿಗೆಯಲ್ಲ ಬದಲಾಗಿ ಸಾಂಪ್ರದಾಯಕ್ಕೆ ದಕ್ಕೆ ಬಾರದ ರೀತಿಯಲ್ಲಿ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರಲ್ಲದೆ ನನ್ನಿಂದ ಯಕ್ಷಕಲೆ ಎನ್ನುವುದು ಮೊದಲು ಬಿಡಬೇಕು ಕಲೆಯಿಂದ ನಾನು ಎನ್ನುವ ಮನಸ್ಥಿತಿ ಬೆಳೆದಾಗ ಕಲೆಯುವ ನಿರ್ಗಳವಾಗಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Advertisement. Scroll to continue reading.


ಈ ಸಂದರ್ಭದಲ್ಲಿ ಪ್ರಸಿದ್ಧ ಸ್ತ್ರೀ ವೇಷಧಾರಿ ರಾಜೀವ ಶೆಟ್ಟಿ ಹೊಸಂಗಡಿಯವರಿಗೆ ಕೋಟ ವೈಕುಂಠ ಯಕ್ಷಕಿನ್ನರ ಹಾಗೂ ಪ್ರಾಚಾರ್ಯ ನಾರಾಯಪ್ಪ ಉಪ್ಪೂರ ಪ್ರಶಸ್ತಿಯನ್ನು ಶ್ರೇಷ್ಠ ಭಾಗವತ ಕೆ.ಪಿ ಹೆಗಡೆ ಇವರಿಗೆ ಪ್ರದಾನಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್,ಯಕ್ಷಾಂತರಂಗ ಕೋಟ ಇದರ ಕೃಷ್ಣಮೂರ್ತಿ ಉರಾಳ,ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಕೋಟ ವೈಕುಂಠ ಪುತ್ರ ಉದ್ಯಮಿ ಉಮೇಶ ರಾಜ್ ಬೆಂಗಳೂರು ಉಪಸ್ಥಿತರಿದ್ದರು. ಸನ್ಮಾನಪತ್ರವನ್ನು ದೇವಳದ ವ್ಯವಸ್ಥಪನಾ ಸಮಿತಿ ಸದಸ್ಯ ಸತೀಶ್ ಹೆಗ್ಡೆ ವಾಚಿಸಿದರು.
ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರಶೇಖರ ಆಚಾರ್ಯ ನಿರೂಪಿಸಿದರು.ದೇವಳದ ಟ್ರಸ್ಟಿ ಚಂದ್ರ ಪೂಜಾರಿ,ಎಂ.ಸುಬ್ರಾಯ ಆಚಾರ್ಯ ಸಹಕರಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!