ಉಡುಪಿ : ಸಂಸ್ಕೃತ ಭಾರತಿ ಉಡುಪಿ, ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್, ರಥಬೀದಿ ಗೆಳೆಯರು ಉಡುಪಿ ವತಿಯಿಂದ “ಬನ್ನಂಜೆ ಗೋವಿಂದಾಚಾರ್ಯ ಸ್ಮೃತಿ – ಕೃತಿ” ಕಾರ್ಯಕ್ರಮ ಡಿಸೆಂಬರ್ 11, ಶನಿವಾರದಂದು ಸಂಜೆ 4 ಗಂಟೆಗೆ ತೆಂಕಪೇಟೆ “ಸಂಸ್ಕೃತ ಭಾರತಿ” ಯಲ್ಲಿ ನಡೆಯಲಿದೆ.
ಉಡುಪಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಸಗ್ರಿ ರಾಘವೇಂದ್ರ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಕೃತ ವಿದ್ವಾಂಸ ಡಾ.ರಾಘವೇಂದ್ರ ರಾವ್ ಭಾಷಾಂತರ ಸಾಹಿತ್ಯಕ್ಕೆ ಬನ್ನಂಜೆಯವರ ಕೊಡುಗೆ ಕುರಿತು ಮಾತನಾಡಲಿದ್ದಾರೆ.
ಸುರಭಿ ಕೊಡವೂರು, ಶಂಭು ಭಟ್, ನಟರಾಜ ಎಚ್.ಎನ್, ಪ್ರಣಾದ ರಾವ್ ಬನ್ನಂಜೆಯವರ ಗೀತೆಗಳ ಗಾಯನ ಮಾಡಲಿದ್ದಾರೆ.
ಈ ವೇಳೆ ಬನ್ನಂಜೆ ಗೋವಿಂದಾಚಾರ್ಯ ಅವರ ಪುಸ್ತಕಗಳ ಪ್ರದರ್ಶನ, ಮಾರಾಟ ನಡೆಯಲಿದೆ.
Advertisement. Scroll to continue reading.


In this article:bannanje govindacharya, Diksoochi news, diksoochi Tv, diksoochi udupi, hiriadka samskrithi siri trust, Rathabeedi Geleyaru, Samskrithi Bharathi
Click to comment

































