ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ – ಶಿವಮೊಗ್ಗ ಮುಖ್ಯ ರಸ್ತೆ ಬಾರಕೂರು ಸೇತುವೆ ಬಳಿ ತಿರುವಿನಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಹುಲ್ಲುಗಳು ಸಂಚಾರಕ್ಕೆ ತೊಂದರೆಯಾಗುವುದರ ಕುರಿತು ದಿಕ್ಸೂಚಿ ನ್ಯೂಸ್ ಕೆಲವು ದಿನಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಸರಿಪಡಿಸುವಂತೆ ವರದಿ ಮಾಡಿ ಗಮನ ಸೆಳೆದಿತ್ತು.

ವರದಿಯ ಪರಿಣಾಮ ನಿನ್ನೆ ರಸ್ತೆಯ ಎರಡು ಭಾಗದಲ್ಲಿರುವ ಹುಲ್ಲುಗಳನ್ನು ಕಟಾವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಸಾಯಿಬರ ಕಟ್ಟೆ ಬಳಿಯ ತಿರುವಿನಲ್ಲಿ ಇಂತಹುದೆ ಸಮಸ್ಯೆಯಿಂದ 4 ದಿನದ ಹಿಂದೆ ಅಪಘಾತವೊಂದು ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.
ಗ್ರಾಮೀಣ ಭಾಗ ಸೇರಿದಂತೆ ಅನೇಕ ಭಾಗದ ತಿರುವಿನ ಜಾಗದಲ್ಲಿ ಇಂತಹ ಸಮಸ್ಯೆ ಇನ್ನೂ ಕೂಡಾ ಇದೆ ಅದನ್ನು ಕೂಡಲೆ ಸರಿಪಡಿಸಿ ಅಪಘಾತವನ್ನು ತಪ್ಪಿಸಬೇಕಾಗಿದೆ .
Advertisement. Scroll to continue reading.
