Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಮೆಕ್ಸಿಕೋದಲ್ಲಿ ಭೀಕರ ಅಪಘಾತ; 49 ಮಂದಿ ಸಾವು

0

ಮೆಕ್ಸಿಕೋ: ಎರಡು ಟ್ರಕ್‌ಗಳು ಡಿಕ್ಕಿ ಹೊಡೆದಿದ್ದು, 49 ಜನರು ಸಾವನ್ನಪ್ಪಿದ್ದಾರೆ ಮತ್ತು 58 ಹೆಚ್ಚು ಗಾಯಗೊಂಡಿರುವ ಘಟನೆ ಚಿಯಾಪಾಸ್ ರಾಜ್ಯದ ಆಗ್ನೇಯ ಮೆಕ್ಸಿಕನ್ ನಗರದ ಟಕ್ಸ್ಟ್ಲಾ ಗುಟೈರೆಜ್ ಬಳಿ ನಡೆದಿದೆ.

ಅಪಘಾತಕ್ಕೀಡಾದ ಟ್ರಕ್‌ಗಳಲ್ಲಿ ಮಧ್ಯ ಅಮೆರಿಕದಿಂದ 100 ಕ್ಕೂ ಹೆಚ್ಚು ವಲಸಿಗರು ಇದ್ದರು ಎನ್ನಲಾಗಿದೆ.

ಟ್ರಕ್ ಅಪಾಯಕಾರಿ ತಿರುವಿನ ಮೇಲೆ ಪಲ್ಟಿಯಾಗಿದ್ದು,  ಚಿಯಾಪಾಸ್ ರಾಜ್ಯದ ರಾಜಧಾನಿ ಟಕ್ಸ್ಟ್ಲಾ ಗುಟೈರೆಜ್ಗೆ ಹೋಗುವ ಮುಖ್ಯ ರಸ್ತೆಯಲ್ಲಿ ಪಾದಚಾರಿ ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಪರಿಣಾಮ 49 ಮಂದಿ ದಾರುಣ ಸಾವನ್ನಪ್ಪಿದ್ದಾರೆ. 58 ಮಂದಿಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!