ಬೆಂಗಳೂರು: ತೆರಿಗೆ ಪಾವತಿಸದ ಕಾರಣ ಮಲ್ಲೆಶ್ವರದಲ್ಲಿರುವ ಮಂತ್ರಿ ಮಾಲ್ಗೆ ಹಾಕಿರುವ ಬೀಗ ಮುದ್ರೆ ತೆರವುಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ. 4 ಕೋಟಿ ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ನೀಡಿದ ಹಿನ್ನೆಲೆ ಮಂತ್ರಿ ಮಾಲ್ಗೆ ಹಾಕಿದ್ದ ಬೀಗವನ್ನು ಬಿಬಿಎಂಪಿ ತೆಗೆದಿದೆ.
ಮಂತ್ರಿ ಮಾಲ್ ಆಡಳಿತ ಮಂಡಳಿಯ ಮೆಸರ್ಸ್ ಅಭಿಷೇಕ್ ಪ್ರೊಪ್ಬಿಲ್ಡ್ ಪ್ರೆವೆಟ್ ಲಿಮಿಟೆಡ್ ಕಂಪನಿ ಹಾಗೂ ಮೆಸರ್ಸ್ ಹಮಾರಾ ಶೆಲ್ಟರ್ಸ್ ಪ್ರೆವೆಟ್ ಲಿಮಿಟೆಡ್ ಕಂಪನಿ ಸಲ್ಲಿ ಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಮಂತ್ರಿಮಾಲ್ 2018-19 ವರ್ಷದಿಂದ ಅರಂಭಿಸಿ ಇದುವರೆಗೂ ಒಟ್ಟು 27 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಸಾಕಷ್ಟು ಭಾರಿ ನೋಟೀಸ್ ಕೊಟ್ಟು ಬೇಸತ್ತ ಬಿಬಿಎಂಪಿ ಡಿಸೆಂಬರ್ 6 ರಂದು ಮಂತ್ರಿ ಮಾಲ್ ಗೆ ಬೀಗ ಹಾಕಿದೆ. ಕಳೆದ ಐದು ದಿನಗಳಿಂದಮಂತ್ರಿ ಮಾಲ್ ಗೆ ಬೀಗ ಹಾಕಿರುವುದರಿಂದ ಮಾಲ್ ಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಬಿಬಿಎಂಪಿ ಕ್ರಮದ ವಿರುದ್ಧ ಮಂತ್ರಿ ಹೈಕೋರ್ಟ್ ಮೊರೆ ಹೋಗಿತ್ತು.
