ಮಧ್ಯಪ್ರದೇಶ : ಆನ್‌ಲೈನ್ ತರಗತಿಗೆ ಹಾಜರಾಗುತ್ತಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡು 15 ವರ್ಷದ ಬಾಲಕ ಗಾಯಗೊಂಡಿರುವ ಸತ್ನಾ ಜಿಲ್ಲೆಯ ಚಂದ್ ಕುಯಿಲಾ ಎಂಬಲ್ಲಿ ನಡೆದಿದೆ.
8ನೇ ತರಗತಿಯಲ್ಲಿ ಓದುತ್ತಿರುವ ರಾಮ್‌ಪ್ರಕಾಶ್ ಬದೌರಿಯಾ ಗಾಯಗೊಂಡಿರುವ ವಿದ್ಯಾರ್ಥಿ. ವಿದ್ಯಾರ್ಥಿ ಶಾಲೆಯಲ್ಲಿ ಆನ್‌ಲೈನ್ ತರಗತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಮೊಬೈಲ್ ಫೋನ್ ಸ್ಫೋಟಗೊಂಡಿದೆ. ರಾಮ್ ಪ್ರಕಾಶ್ ಅವರ ದವಡೆಗೆ ಗಾಯವಾಗಿದೆ ಎನ್ನಲಾಗಿದೆ.
ಘಟನೆಯ ವೇಳೆ ಅವರ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಈ ಅವಘಡ ನಡೆದಿದೆ. ಸ್ಫೋಟದ ಶಬ್ದಕ್ಕೆ ಅಕ್ಕ ಪಕ್ಕದ ಮನೆಯವರು ಓಡಿ ಬಂದಿದ್ದು, ಮೊಬೈಲ್ ಸ್ಫೋಟಗೊಂಡಿರುವುದು ತಿಳಿದುಬಂದಿದೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement. Scroll to continue reading.

In this article:Diksoochi news, Diksoochi t v, diksoochi udupi, mobile blast, satna
Click to comment

































