ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಜಿಲ್ಲೆಯಲ್ಲಿ ಹಡಿಲು ಭೂಮಿಯ ಕೃಷಿಯನ್ನು ಆರಂಭಿಸಿದ ಮೊದಲ ಕೀರ್ತಿ ಉಪ್ಪೂರು, ಕೊಳಲಗಿರಿ ಯುವ ವಿಚಾರ ವೇದಿಕೆಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಇಲ್ಲಿನ ಯುವ ವಿಚಾರ ವೇದಿಕೆಗೆ ಸಂಘಟಕರು 4 ವರ್ಷದಿಂದ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಿ ಬೆಳೆದ ಬೆಳೆಯನ್ನು ಸಾಲ್ಮರ ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರಕ್ಕೆ ನೀಡುತ್ತಿದ್ದು ಈ ವರ್ಷ ಕೂಡಾ 2 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಿ ಮಾತನಾಡಿ ಇಂತಹ ಸಂಘಟನೆಗಳು ಸಮಾಜಕ್ಕೆ ಮಾದರಿ. ಹಡಿಲು ಭೂಮಿ ಕೃಷಿ ಯೋಜನೆಯನ್ನು ಎಲ್ಲಾ ಭಾಗದ ಯುವ ಸಂಘಟನೆಗಳು ಮಾಡಬೇಕು ಎಂದರು.


ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ಸ್ಪಂದನ ಕೇಂದ್ರದ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಜನಾರ್ಧನ, ಯುವ ವಿಚಾರ ವೇದಿಕೆ ಅಧ್ಯಕ್ಷ ದಿನೇಶ್ ಶೆಟ್ಟಿ, ಹಿರಿಯ ಸದಸ್ಯರಾದ ಮಾಧವಣ್ಣ, ಕಾರ್ಯದರ್ಶಿ ಸುಕೇಶ್, ಮಹಿಳಾ ಸದಸ್ಯರಾದ ಶೋಭಾ ಯೋಗೀಶ್, ಶಕುಂತಲಾ, ಬೃಂದಾ, ಸೌಮ್ಯ, ಹರಿಣಾಕ್ಷಿ, ಸದಸ್ಯರಾದ ಸದಾಶಿವ, ಅಶೋಕ್, ರವೀಂದ್ರ, ಶಶಿಕುಮಾರ್, ಸುಬ್ರಹ್ಮಣ್ಯ, ವೈಭವ್, ಶ್ರೇಯಸ್ ಉಪಸ್ಥಿತರಿದ್ದರು.
ವೇದಿಕೆಯ ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿ, ನಿರೂಪಿಸಿ, ಸದಾಶಿವ ವಂದಿಸಿದರು.

































