ನವದೆಹಲಿ : 15 ರಿಂದ 18 ವರ್ಷದ ಮಕ್ಕಳಿಗೆ 2022 ರ ಜನವರಿ 3 ರಿಂದ ಆರಂಭಿಸಲಾಗುವುದು. ಇದರಿಂದ ಶಾಲಾ, ಕಾಲೇಜುಗಳಿಗೆ ಹೋಗುತ್ತಿರುವ ಮಕ್ಕಳಿಗೆ ಸುರಕ್ಷತೆಯ ಅನುಭವವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಆರೋಗ್ಯ ಸಿಬ್ಬಂದಿಗಳಿಗೆ ಬೂಷ್ಟರ್ ಡೋಸ್ ಜನವರಿ 10 ರಿಂದ ಆರಂಭಿಸಲಾಗುವುದು. ಕೊರೊನಾ ವಿರುದ್ಧದ ನಮ್ಮ ಯುದ್ಧದಲ್ಲಿ ಇದು ಮತ್ತಷ್ಟು ಶಕ್ತಿ ತುಂಬಲಿ ಎಂದರು. 60 ಮೀರಿದ ಕಾಯಿಲೆ ಪೀಡಿತರಿಗೂ ಬೂಸ್ಟರ್ ಡೋಸ್ ನೀಡಲಾಗುವುದು ಎಂದರು.
ಎಲ್ಲರೂ ಹೊಸ ವರ್ಷಕ್ಕೆ ಕಾಯುತ್ತಿದ್ದೀರಿ. ಹಲವು ದೇಶದಲ್ಲಿ ಒಮಿಕ್ರಾನ್ ಹೆಚ್ಚಳವಾಗಿದೆ. ಭಾರತದಲ್ಲೂ ಒಮಿಕ್ರಾನ್ ಕಾಣಿಸಿಕೊಂಡಿದೆ. ಇದು ಎಚ್ಚರಿಕೆಯಿಂದ ಇರುವ ಸಮಯವಾಗಿದೆ. ಭಯ ಪಡುವ ಸಮಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಐಸಿಯು, ನಾನ್ ಐಸಿಯು ಬೆಟ್, 3 ಸಾವಿರಕ್ಕೂ ಅಧಿಕ ಆಕ್ಸಿಜನ್ ಪ್ಲಾಂಟ್, 4 ಲಕ್ಷ ಸಿಲಿಂಡರ್ ವಿತರಿಸಲಾಗುತ್ತಿದೆ. ವೈರಸ್ ಹೊಸ ಅವತಾರ ಎತ್ತಿದ್ದಂತೆ ಅದನ್ನು ಎದುರಿಸುವ ಶಕ್ತಿಯೂ ಹೆಚ್ಚಿದೆ ಎಂದು ಹೇಳಿದರು.
ಬಹುತೇಕರಿಗೆ ಎರಡು ಡೋಸ್ ಲಸಿಕೆಗಳು ಸಿಕ್ಕಿವೆ. ವಿಶ್ವದಲ್ಲಿ ಅತಿಹೆಚ್ಚು ಜನರಿಗೆ ನಾವು ಲಸಿಕೆ ನೀಡಿದ್ದೇವೆ . ಇದು ಮೆಚ್ಚುಗೆ ಪಡೆದಿವೆ. ದೇಶದ ಎಲ್ಲ ನಾಗರಿಕರ ಸಾಮೂಹಿಕ ಪರಿಶ್ರಮದಿಂದ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿದೆ. ಈಗ ಎಚ್ಚರಿಕೆ ವಹಿಸುವುದು ಬಹಳ ಅಗತ್ಯವಾಗಿದೆ. ಕೊರೊನಾ ವಿರುದ್ಧ ಭಾರತ ಹೋರಾಟ ಮುಂದುವರೆಯುತ್ತಿದೆ. 12 ತಿಂಗಳಿನಿಂದ ವ್ಯಾಕ್ಸಿನೇಷನ್ ಆರಂಭವಾಗಿದೆ. ವ್ಯಾಕ್ಸಿನ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ವಿರುದ್ಧ ಭಾರತದ ಹೋರಾಟ ನಿಲ್ಲವುದಿಲ್ಲ. ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ ಎಂದರು.

