ವರದಿ : ದಿನೇಶ್ ರಾಯಪ್ಪನಮಠ
ಕೋಟ: ಅಟಲ್ ಜೀ ಈ ದೇಶ ಕಂಡ ಮಹಾನ್ ಮಾನವತವಾದಿ ಅವರ ಜನುಮದಿನವನ್ನು ಅರ್ಥಪೂರ್ಣ ದಿನವನ್ನಾಗಿಸಲು ಪ್ರತಿಯೊಬ್ಬರು ಪಣತೊಡಬೇಕು ಎಂದು ರಾಜ್ಯದ ಸಮಾಜಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸಾಲಿಗ್ರಾಮ ಬಸ್ ತಂಗುದಾಣದಲ್ಲಿ ಬಿಜೆಪಿ ಸಾಲಿಗ್ರಾಮ ಮಹಾಶಕ್ತಿಕೇಂದ್ರದ ವತಿಯಿಂದ ಹಮ್ಮಿಕೊಂಡ ಅಟಲ್ ಬಿಹಾರಿ ವಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ಕಟ್ಟುವ ಕಾಯಕದಲ್ಲಿ ಅಟಲ್ ಜೀ ಮುಂಚೂಣಿಗೆ ನಿಲ್ಲುತ್ತಾರೆ. ಅವರ ವಿಚಾರಧಾರೆ,ಪಕ್ಷಕಟ್ಟುವ ನಿಲುವು ಇಂದು ಬಹು ಎತ್ತರಕ್ಕೆ ನಿಲ್ಲಿಸಿದೆ. ಜನಸಂಘದಿಂದ ಹಿಡಿದು ಭಾರತೀಯ ಜನತಾಪಾರ್ಟಿಯವರೆಗೆ ನಡೆದು ಬಂದು ದಾರಿ ಅಮೋಗವಾದದ್ದು,ವ್ಯಕ್ತಿಗಿಂತ ಪಾರ್ಟಿ ಮುಖ್ಯ ಪಾರ್ಟಿಗಿಂತ ದೇಶ ಮುಖ್ಯ ಎಂದ ಧ್ಯೇಯ ಧೋರಣೆಯೊಂದಿಗೆ ಜಗತ್ತಿಗೆ ಪರಿಚಯಿಸಿಕೊಂಡಿದ್ದಾರೆ. ದೇಶದ ಪ್ರಧಾನಿಯಾಗಿ ನಿರ್ಗಳವಾಗಿ ಆಡಳಿತ ನಡೆಸಿದ ಹೆಮ್ಮೆಯ ನಾಯಕರಾಗಿ ತನ್ನ ಜೀವಿತ ಕೊನೆ ಘಳಿಗೆಯವರೆಗೂ ದೇಶದ ಬಗ್ಗೆ ಅಪಾರವಾದ ಚಿಂತನೆ ಬೆಳೆಸಿಕೊಂಡ ಮಹಾನ್ ಮಾನವತಾವಾದಿಯಾಗಿದ್ದಾರೆ. ಅವರ ವಿಚಾರಧಾರೆಯನ್ನು ಇಂದಿನ ಪ್ರಧಾನಿ ನರೇಂದ್ರ ಮೋದಿ ನನಸಾಗಿಸುವ ಕೆಲಸದಲ್ಲಿನಿರತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಗಣೇಶ್ ಅಡಿಗ ಸಾಲಿಗ್ರಾಮ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಟಲ್ ಜೀ ಯವರ ಭಾವಚಿತ್ರಕ್ಕೆ ಪುಷ್ರ್ಭಾಚನೆಗೈಯಲ್ಲಾಯಿತು.
ವಾಗ್ಮಿ ಪ್ರಕಾಶ್ ಮಲ್ಪೆ,ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಸಾಲಿಗ್ರಾಮ ಶಕ್ತಿಕೇಂದ್ರದ ಅಧ್ಯಕ್ಷ ಜಯೇಂದ್ರ ಪೂಜಾರಿ,ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಸುಲತಾ ಹೆಗ್ಡೆ,ಉಪಾಧ್ಯಕ್ಷೆ ಅನುಸೂಯ ಹೇರ್ಳೆ,ಪಕ್ಷದ ಹಿರಿಯ ಮುಖಂಡ ಶಿವರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಸಾಲಿಗ್ರಾಮ ಪ.ಪಂ ಸದಸ್ಯ ರಾಜು ಪೂಜಾರಿ ಸ್ವಾಗತಿಸಿದರು.ಸದಸ್ಯ ಸಂಜೀವ ದೇವಾಡಿಗ ಸನ್ಮಾನಪತ್ರ ವಾಚಿಸಿದರು.
ಬಿಜೆಪಿ ಕುಂದಾಪುರ ಮಂಡಲ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ನಿರೂಪಿಸಿದರು.

