Connect with us

Hi, what are you looking for?

Diksoochi News

ರಾಷ್ಟ್ರೀಯ

ಮಕ್ಕಳಿಗೆ ಕೋವ್ಯಾಕ್ಸಿನ್, ಬೂಸ್ಟರ್ ಡೋಸ್ ಕುರಿತು ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವಾಲಯ

3

ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯವು ಬೂಸ್ಟರ್ ಡೋಸ್ ಸಂಬಂಧ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಜನವರಿ 3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭಿಸಲಾಗುತ್ತಿದೆ. ಅರ್ಹ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಮಾತ್ರವೇ ನೀಡುವುದಾಗಿ ತಿಳಿಸಿದೆ.

ಈಗಾಗಲೇ ಮೊದಲ ಮತ್ತು 2ನೇ ಡೋಸ್ ಲಸಿಕೆ ಪಡೆದಿರುವಂತಹ ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕೆಲಸಗಾರರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ಲಸಿಕೆ ಆರಂಭಿಸಲಾಗುತ್ತಿದೆ. ಎರಡನೇ ಡೋಸ್ ಲಸಿಕೆ ಪಡೆದ 9 ತಿಂಗಳ ನಂತರ 2ನೇ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಮಾಹಿತಿ ನೀಡಿದೆ.

ವೈದ್ಯರ ಪ್ರಮಾಣ ಪತ್ರ ಅಗತ್ಯ:

Advertisement. Scroll to continue reading.

60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಸಲಹೆಯ ಮೇರೆಗೆ ಬೂಸ್ಟರ್ ಡೋಸ್ ನ್ನು ಜನವರಿ 10 ರಿಂದ ನೀಡಿಸಲಾಗುವುದು. ಇದಕ್ಕೆ ವೈದ್ಯರಿಂದ ಪ್ರಮಾಣ ಪತ್ರವನ್ನು ನೀಡಬೇಕು. 60 ವರ್ಷ ಮೇಲ್ಪಟ್ಟವರಿಗೂ ಮೊದಲ ಬೂಸ್ಟರ್ ಡೋಸ್ ಪಡೆದ ನಂತರ 2ನೇ ಬೂಸ್ಟರ್ ಡೋಸ್ ಪಡೆಯಲು 9 ತಿಂಗಳ ಕಾಲಾವಕಾಶ ನಿಗದಿ ಪಡಿಸಲಾಗಿದೆ.

ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕೆಲಸಗಾರರ ನೋಂದಣಿಗಾಗಿ ಮಾರ್ಗಸೂಚಿಗಳು:

  • ಈ ಹಿಂದೆ ಮೊದಲ ಹಾಗೂ 2ನೇ ಡೋಸ್ ಲಸಿಕೆ ಪಡೆದಂತ ಸಂದರ್ಭದಲ್ಲಿನ ಖಾತೆಯ ಮೂಲಕವೇ ಬೂಸ್ಟರ್ ಡೋಸ್ ಪಡೆಯಲು ಅವಕಾಶ.
  • ಬೂಸ್ಟರ್ ಡೋಸ್ ಲಸಿಕೆ 2ನೇ ಡೋಸ್ ಲಸಿಕೆಯನ್ನು ಪಡೆದ ಮಾಹಿತಿಯ ಅನುಸಾರ ಕೋವಿನ್ ಆಪ್ ಮೂಲಕ ಅವಕಾಶ.
  • ಕೋವಿನ್ ಆಪ್ ಯಾರು ಬೂಸ್ಟರ್ ಡೋಸ್ ಪಡೆಯಲು ಅರ್ಹರಿದ್ದಾರೆ. ಅವರಿದೆ ಎಸ್‌ಎಂಎಸ್ ಸಂದೇಶದ ಮೂಲಕ ಮಾಹಿತಿ ನೀಡಲಿದೆ.
  • ಬೂಸ್ಟರ್ ಡೋಸ್ ಪಡೆಯಲು ಕೋವಿನ್ ಆಪ್ ಹಾಗೂ ವೆಬ್ ಸೈಟ್ ಮೂಲಕ ಇಲ್ಲವೇ ಆರೋಗ್ಯ ಕೇಂದ್ರಕ್ಕೆ ತೆರಳಿ ನೊಂದಣಿ ಮಾಡಿಕೊಳ್ಳಲು ಅನುಮತಿಸಲಾಗಿದೆ. ಆಫ್ ಲೈನ್ ಹಾಗೂ ಆನ್ ಲೈನ್ ನಲ್ಲಿಯೂ ಅವಕಾಶ ನೀಡಿದೆ.

15 ರಿಂದ 18 ವರ್ಷದ ಮಕ್ಕಳ ನೊಂದಣಿಗೆ ಮಾರ್ಗಸೂಚಿಗಳು :

  • 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿನ್ ಮೂಲಕ ನೊಂದಣಿಗೆ ಅವಕಾಶ.
  • 2007 ಇಲ್ಲವೇ ಅದಕ್ಕಿಂತ ಮುಂಚೆ ಜನಿಸಿದಂತ ಮಕ್ಕಳು ಕೋವಿನ್ ಮೂಲಕ ಲಸಿಕೆ ಪಡೆಯಲು ನೊಂದಣಿ ಮಾಡಿಕೊಳ್ಳುವುದು.
  • ಸ್ವಯಂ ನೋಂದಣಿಗೆ ಆನ್ ಲೈನ್ ಮೂಲಕ ಅವಕಾಶ. ಇದಲ್ಲದೇ ಆಫ್ ಲೈನ್ ಮೂಲಕವೂ ನೋಂದಣಿಗೆ ಅನುಮತಿ.
  • ನೂತನ ಖಾತೆಗೆ ಮೊಬೈಲ್ ಸಂಖ್ಯೆಯನ್ನು ನೀಡುವ ಮೂಲಕ 15-18 ವರ್ಷದ ಮಕ್ಕಳು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ.
  • ಲಸಿಕಾ ಕೇಂದ್ರಗಳಿಗೆ ತೆರಳಿ ನೇರವಾಗಿ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಲು ಅನುಮತಿ.
  • ಲಸಿಕೆ ಪಡೆಯಲು ಅಪಾಯಿಂಟ್ಮೆಂಟ್ ಗಳನ್ನು ಆನ್ ಲೈನ್ ಇಲ್ಲವೇ ಲಸಿಕಾ ಕೇಂದ್ರಗಳಿಗೆ ತೆರಳಿ ಪಡೆಯಬಹುದಾಗಿದೆ.
  • 15 ರಿಂದ 18 ವರ್ಷದ ಮಕ್ಕಳಿಗೆ ಕೇವಲ ಕೋವ್ಯಾಕ್ಸಿನ್ ಲಸಿಕೆ ಮಾತ್ರ ನೀಡಲು ಅನುಮತಿ.

ಈ ಮೇಲ್ಕಂಡ ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೂ ಲಸಿಕೆಯ ನೂತನ ಮಾರ್ಗಸೂಚಿ ಕ್ರಮಗಳು ಜನವರಿ 3, 2022ರಿಂದ ಜಾರಿಗೆ ಬರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಜಾರಿಗೊಳಿಸಿದ್ದು, ಈ ಮಾರ್ಗಸೂಚಿ ಕ್ರಮಗಳು ಕಾಲಕಾಲಕ್ಕೆ ಒಳಪಟ್ಟು ಬದಲಾವಣೆ ಕೂಡ ಆಗಲಿವೆ ಎಂದು ತಿಳಿಸಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!