ವರದಿ : ಬಿ.ಎಸ್.ಆಚಾರ್ಯ
ಕುಂದಾಪುರ : ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ನೇತೃತ್ವದಲ್ಲಿ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪಿಯಲ್ಲಿ ಕೋವಿಡ-19 ಲಸಿಕೆ ಹಾಕಿಸಿ ಕೊಳ್ಳಲು ಬಾಕಿ ಇದ್ದವರ ಮನೆ ಮನೆ ತೆರಳಿ ಸ್ಥಳದಲ್ಲಿಯೇ ಪ್ರಥಮ ಡೋಸ್ ಲಸಿಕೆಯನ್ನು ಹಾಕಿಸಲಾಯಿತು. ಹೆಚ್ಚಿನವರು ವಯೋವೃದ್ದರಿದ್ದು ಎಲ್ಲರಿಗೂ ತಿಳಿ ಹೇಳಿ ಲಸಿಕೆ ಹಾಕಿಸಲಾಯಿತು.

ಮನೆ ಮನೆ ತೆರಳಿ ಲಸಿಕೆ ಅಭಿಯಾನದಲ್ಲಿ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪಿಯ ಎಲ್ಲಾ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಅರೋಗ್ಯ ಸಹಾಯಕಿ ತಲ್ಲೂರು ಗ್ರಾಮ ಪಂಚಾಯತ್ ಸದಸ್ಯರು, ವಂಡ್ಸೆ ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಸಹಾಯಕರು ಹಾಜರಿದ್ದರು.

2 ಗಂಟೆ ಒಳಗೆ ಒಟ್ಟು 30 ಜನರಿಗೆ ಪ್ರಥಮ ಡೋಸ್ ಹಾಕಿಸಲಾಯಿತು

Advertisement. Scroll to continue reading.



































