ದಾವಣಗೆರೆ : ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕು ರಾಜ್ಯದಲ್ಲೂ ಕಾಣಿಸಿಕೊಳ್ಳುತ್ತಿದ್ದು, ದಾವಣಗೆರೆಯಲ್ಲಿ ಮೊದಲ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ಡಿಸೆಂಬರ್ 22ರಂದು ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದ 22 ವರ್ಷದ ಯುವತಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತೆ ಹೆಚ್ಚಿನ ತಪಾಸಣೆಗಾಗಿ ಯುವತಿಯ ಸ್ವಾಬ್ ಅನ್ನು ಹಾಸನ ಲ್ಯಾಬ್ ಗೆ ಕಳುಹಿಸಿ ಕೊಟ್ಟಿದ್ದರು. ಹಾಸನ ಲ್ಯಾಬ್ ನಿಂದ ಡಿಸೆಂಬರ್ 28ಕ್ಕೆ ಪರೀಕ್ಷಾ ವರದಿ ಬಂದಾದ ಬಳಿಕ ಅ ಯುವತಿಗೆ ಒಮಿಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತ ಯುವತಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement. Scroll to continue reading.

In this article:davangere, Diksoochi news, diksoochi Tv, diksoochi udupi, Omicron Variant
Click to comment

































