ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸಾಮಾನ್ಯ ಜ್ಞಾನಕ್ಕೆ ಗ್ರಂಥಾಲಯಗಳು ಹೆಚ್ಚು ಸಹಕಾರಿಯಾಗುತ್ತದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಶನಿವಾರ ಬ್ರಹ್ಮಾವರ ವಾರಂಬಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಡಿಜಿಟಲ್ ಮತ್ತು ಬೀಕನ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ಅನೇಕ ಐಪಿಎಸ್ ಗಳು ಕೂಡಾ ಗ್ರಂಥಾಲಯದಲ್ಲಿ ಎಲ್ಲಾ ವಿಭಾಗದ ಪುಸ್ತಕಗಳ ಸಾಮಾನ್ಯ ಜ್ಞಾನದ ಓದಿನಿಂದ ಪಾಸಾದ ಉದಾಹರಣೆ ಇದೆ ನಗರ ಮಧ್ಯ ಭಾಗದಲ್ಲಿರುವ ಗ್ರಂಥಾಲಯವನ್ನು ಸಾರ್ವಜನಿಕರು ಉಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.

ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ್, ವಾರಂಬಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಫರ್ಜಾನ, ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಸದಾನಂದ ಪೂಜಾರಿ,
ಪ್ರಮುಖರಾದ ಬಿರ್ತಿ ರಾಜೇಶ್ ಶೆಟ್ಟಿ ,ದೇವಾನಂದ ನಾಯಕ್, ಎಸ್ ನಾರಾಯಣ, ನವೀನ ಚಂದ್ರ ನಾಯಕ್, ಹಾಗೂ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.

ಬೀಕನ್ ಗ್ರಂಥಾಲಯದಿಂದ ಅಂಧರಿಗೆ, ಕಿವುಡರಿಗೆ, ಹಿರಿಯರಿಗೆ ಸಹಾಯಕವಾಗಲಿದೆ. ಅವರಿಗೆ ಬೇಕಾದ ಪುಸ್ತಕಗಳು ಸಿಗಲಿವೆ. ಫರಜಾನಾ, ವಾರಂಬಳ್ಳಿ ಗ್ರಾಪಂ ಪಿಡಿಓ



































