Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ತರಬೇತಿ ವೇಳೆ ಹೆಲಿಕಾಪ್ಟರ್ ಪತನ; ಇಬ್ಬರು ಪೈಲೆಟ್ ಗಳ ಸಾವು

3

ಜೆರುಸಲೆಂ: ಉತ್ತರ ಇಸ್ರೇಲಿ ಕರಾವಳಿಯಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಇಸ್ರೇಲಿ ರಕ್ಷಣಾ ಪಡೆಗಳ ಪೈಲೆಟ್‌ಗಳು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಹೆಲಿಕಾಪ್ಟರ್ ತರಬೇತಿ ಹಾರಾಟ ನಡೆಸುತ್ತಿದ್ದಾಗ ಬಂದರು ನಗರವಾದ ಹೈಫಾ ಪ್ರದೇಶದ ಬಳಿ ನಿನ್ನೆ ತಡರಾತ್ರಿ ಇಸ್ರೇಲ್‌ನ ಮೆಡಿಟರೇನಿಯನ್ ಕರಾವಳಿಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಪತನಗೊಂಡಿದೆ. ಪರಿಣಾಮ ಇದರಲ್ಲಿದ್ದ ಇಬ್ಬರು ಇಸ್ರೇಲಿ ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈಫಾದ ರಾಂಬಮ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

ಇಸ್ರೇಲಿ ವಾಯುಪಡೆಯ ಮುಖ್ಯಸ್ಥರು ಎಲ್ಲ ವಿಮಾನ ತರಬೇತಿಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ. ಪೈಲಟ್‌ಗಳ ಕುಟುಂಬಗಳಿಗೆ ವಿಷಯ ತಿಳಿಸಲಾಗಿದೆ. ಈ ಬಗ್ಗೆ ಐಡಿಎಫ್ ಸಂತಾಪ ಸೂಚಿಸಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!