Connect with us

Hi, what are you looking for?

Diksoochi News

ರಾಷ್ಟ್ರೀಯ

ಭಾರತೀಯ ನೌಕಾಪಡೆಯ 1971 ರ ಇಂಡೋ-ಪಾಕ್ ಯುದ್ಧದ ಅನುಭವಿ ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ ನಿಧನ

3

ಒಡಿಶಾ: ಭಾರತೀಯ ನೌಕಾಪಡೆಯ 1971 ರ ಇಂಡೋ-ಪಾಕ್ ಯುದ್ಧದ ಅನುಭವಿ ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ(100) ಅವರು ಸೋಮವಾರ ಸಂಜೆ ಭುವನೇಶ್ವರದಲ್ಲಿ ನಿಧನರಾಗಿದ್ದಾರೆ.

ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿನ್ನೆ ಸಂಜೆ 6.20ಕ್ಕೆ ಕೊನೆಯುಸಿರೆಳೆದಿದ್ದು, ಇಂದು ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕಾಗಿ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿದು ಬಂದಿದೆ.

ಶರ್ಮಾ 1971 ರ ಯುದ್ಧದ ಸಮಯದಲ್ಲಿ ಈಸ್ಟರ್ನ್ ಫ್ಲೀಟ್ ಕಮಾಂಡಿಂಗ್ ಫ್ಲಾಗ್ ಆಫೀಸರ್ ಆಗಿದ್ದರು. ಭಾರತವು 1971 ರ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಶರ್ಮಾ ಅವರು ಈಸ್ಟರ್ನ್ ನೇವಲ್ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಫ್‌ಒಸಿ ಇನ್ ಸಿ) ಆಗಿಯೂ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

Advertisement. Scroll to continue reading.

ಶರ್ಮಾ ಅವರಿಗೆ 100 ವರ್ಷ ವಯಸ್ಸಾಗಿತ್ತು. 2021ರ ಡಿಸೆಂಬರ್ 1 ರಂದು ತಮ್ಮ 100 ನೇ ಹುಟ್ಟುಹಬ್ಬವನ್ನು ಅವರು ಆಚರಿಸಿಕೊಂಡಿದ್ದರು.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಆಜಾದಿ ಕಾ ಅಮೃತ್ ಮಹೋಸ್ತವ್ ಆಚರಣೆಯಲ್ಲಿ ಶರ್ಮಾ ಅವರು ಭಾಗವಹಿಸಿದ್ದರು.

ಅವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಟ್ವೀಟ್ ಮಾಡಿದ್ದಾರೆ. ‘ಒಡಿಶಾದ ಸುಪ್ರಸಿದ್ಧ ಪುತ್ರರಲ್ಲಿ ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ ಒಬ್ಬರು. ಅವರ ನಿಧನದ ಸುದ್ದಿ ತಿಳಿದು ಬಹಳ ದುಃಖವಾಗಿದೆ. ಅನೇಕ ಯುದ್ಧಗಳಲ್ಲಿ ಭಾರತದ ಸೈನಿಕರ ನೇತೃತ್ವ ವಹಿಸಿದ್ದರು’ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!