ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 15 ರಿಂದ 18 ವರ್ಷದವರಿಗೆ ವ್ಯಾಕ್ಸಿನೇಶನ್ ನೀಡುವ ಕಾರ್ಯಕ್ರಮ ಸೋಮವಾರ ಬಾರಕೂರು ಶ್ರೀ ವಿದ್ಯೇಶ ವಿದ್ಯಮಾನ್ಯ ನೇಶನಲ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಮೇರಿನೋಲ್ ಹೈಸ್ಕೂಲ್ ನಲ್ಲಿ ಜರುಗಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ . ರೋಹಿಣಿ ನೇತೃತ್ವ ವಹಿಸಿದ್ದರು.
ಡಾ.ಬಿ.ಎಂ ಸೋಮಯಾಜಿ, ಬಾರಕೂರು ಗ್ರಾಮ ಪಂಚಾಯತಿ ಸದಸ್ಯ ಶರಣು ಪೂಜಾರಿ, ಶಾಲಾ ಪ್ರಿನ್ಸಿಪಾಲ್ ಪ್ರೀತಿರೇಖಾ ಮತ್ತು ಶಿಕ್ಷಕ ರಕ್ಷಕ ಸಂಘದ ಪಧಾಧಿಕಾರಿಗಳು , ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Advertisement. Scroll to continue reading.