ಹೈದರಾಬಾದ್: ತೆಲುಗು ನಟ ಮಹೇಶ್ ಬಾಬು ಗೆ ಕೋವಿಡ್ ಸೋಂಕು ತಗುಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದೇನೆ ಮತ್ತು ಮನೆಯಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಯಾರಾದರೂ ಲಸಿಕೆ ಹಾಕದಿದ್ದರೆ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಅಭಿಮಾನಿಗಳನ್ನು ಒತ್ತಾಯಿಸಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ ಎಂದಿದ್ದಾರೆ.
Advertisement. Scroll to continue reading.

ಈ ಬಾರಿ ಹೊಸ ವರ್ಷವನ್ನು ಮಹೇಶ್ ಬಾಬು, ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಕ್ಕಳೊಂದಿಗೆ ದುಬೈನಲ್ಲಿ ಆಚರಿಸಿದ್ದರು.
In this article:Covid 19, Diksoochi news, diksoochi Tv, diksoochi udupi, Mahesh babu, Telugu super star
Click to comment

































