ಬೆಂಗಳೂರು : ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ. ನಟಿ ಅಮೃತಾ ನಾಯ್ಡು ಪುತ್ರಿ ಸಮನ್ವಿ(6) ಮೃತ ಬಾಲಕಿ.
ನಟಿ ಅಮೃತಾ ನಾಯ್ಡು ಹಾಗೂ ಪುತ್ರಿ ಸಮನ್ವಿ ಖಾಸಗಿ ವಾಹಿನಿಯ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಸ್ಪರ್ಧಿಗಳಾಗಿದ್ದರು. ಕಳೆದ ವಾರವಷ್ಟೇ ಎಲಿಮಿನೇಟ್ ಆಗಿದ್ದರು.
ವಾಜರಹಳ್ಳಿಯತ್ತ ತಾಯಿ, ಮಗಳು ಸಾಗುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಗಳು ಸಮನ್ವಿಗೆ ಮೃತಪಟ್ಟಿದ್ದು, ತಾಯಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
Advertisement. Scroll to continue reading.

ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In this article:accident, Amrutha Naidu, Diksoochi news, diksoochi Tv, diksoochi udupi, konanakunte, nammamma super star, samanvi
Click to comment

































