ವರದಿ : ದಿನೇಶ್ ರಾಯಪ್ಪನಮಠ
ಕೋಟ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಗಿಳಿಯಾರುನಲ್ಲಿ ಇತ್ತೀಚಿಗೆ ನಡೆದ ಸ್ಪೋರ್ಟ್ಸ್ ಕರಾಟೆ ಡು ಫಿಟ್ ನೆಸ್ ಮತ್ತು ಸೆಲ್ಫಿ ಡಿಫೆನ್ಸ್ ಅಸೋಸಿಯೇಷನ್ ಇಂಡಿಯಾ 2021 – 22 ನೇ ಸಾಲಿನ ನಡೆಸಿದ ಕಲರ್ ಬೆಲ್ಟ್ ಪರೀಕ್ಷೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆಯ 6ನೇ ತರಗತಿಯ ವಿದ್ಯಾರ್ಥಿ ಸುಶಾಂತ್ ಜಿ. ಕರಾಟೆ ವಿಶೇಷ ಸಾಧನೆ ಮಾಡಿದ್ದಾರೆ.

ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆ ಎಸ್ಡಿಎಂಸಿ ಅಧ್ಯಕ್ಷ ವಿಶಾಲ ರವರ ಪುತ್ರ. ಈ ಕಾರ್ಯಕ್ರಮದಲ್ಲಿ ವಕೀಲ ಮಂಜುನಾಥ ಗಿಳಿಯಾರ್, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಸ್ಪೋರ್ಟ್ಸ್ ಕರಾಟೆ ಅಧ್ಯಕ್ಷ ರೆಂಷಿ, ಸ್ಪೋರ್ಟ್ಸ್ ಕರಾಟೆ ಕಾರ್ಯದರ್ಶಿ ಮಂಜುನಾಥ ಎಂ ಮೊಗವೀರ ಮತ್ತಿತರರು ಭಾಗವಹಿಸಿದ್ದರು.
Advertisement. Scroll to continue reading.

In this article:Diksoochi news, diksoochi Tv, diksoochi udupi, karate belt, Sushanth G
Click to comment

































