ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬಾರಕೂರು ಬಂಡೀಮಠ ಶ್ರೀಕ್ಷೇತ್ರ ನಾಗರಡಿ ಮತ್ತು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವದ ಅಂಗವಾಗಿ ಶುಕ್ರವಾರ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಾಗಮಂಡಲ ಸೇವೆ ಮಹಾ ಅನ್ನ ಸಂತರ್ಪಣೆ ಜರುಗಿತು.
ಪ್ರಕೃತಿ ಸಹಜವಾಗಿ ಉಳಿಸಿಕೊಂಡ ಇಲ್ಲಿನ ಆಡಳಿತ ಮಂಡಳಿ ನಾಗರಡಿಯ ಪರಿಸರದಲ್ಲಿ ಮರಗಿಡಗಳು ಬೆಳೆದು ನಿಂತಿರುವುದನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದೆ. ಡಮರು ಮೇಳದವರ ಪ್ರಥಮ ಡಮರು ಸೇವೆ ಕೂಡಾ ಬಂಡೀಮಠದಲ್ಲಿ ಆರಂಭವಾಗುವುದು ಅನಾದಿಕಾಲದಿಂದಲೂ ಬಂದ ನಂಬಿಕೆ.
ಉತ್ತರಾಯಣದ ಸೂರ್ಯೋದಯ ಕಾಲದಲ್ಲಿ ನಡೆಯುವ ನಾಗಮಂಡಲಕ್ಕೆ ನಾನಾ ಭಾಗದ ಹಲವಾರು ಭಕ್ತರು ಆಗಮಿಸಿದರು.
Advertisement. Scroll to continue reading.