ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ಇಂದು ನಿಧನರಾಗಿದ್ದಾರೆ. ಪ್ರದೀಪ್ ರಾಜ್ ಅವರಿಗೆ 46 ವರ್ಷ ವಯಸ್ಸಾಗಿತ್ತು.
ಪ್ರದೀಪ್ ರಾಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ಅವರು ಡಯಾಬಿಟಿಸ್ನಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎನ್ನಲಾಗಿದೆ.
Advertisement. Scroll to continue reading.

ಬೆಂಗಳೂರು 23, ಕಿರಾತಕ, ಅಂಜದ ಗಂಡು, ಮಿಸ್ಟರ್ 420, ಕಿಚ್ಚು ಸೇರಿದಂತೆ ಮೊದಲಾದ ಚಿತ್ರಗಳಿಗೆ ಪ್ರದೀಪ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದರು.
ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಪ್ರದೀಪ್ ರಾಜ್ ಅಗಲಿದ್ದಾರೆ.
Advertisement. Scroll to continue reading.

In this article:anjada gandu, Diksoochi news, diksoochi Tv, diksoochi udupi, Kirathaka, Pradeep Raj
Click to comment

































