ಬೆಂಗಳೂರು: ಬಿಎಂಟಿಸಿ ಬಸ್ಸೊಂದು ದಿಢೀರ್ ಬೆಂಕಿ ಕಾಣಿಸಿಕೊಂಡು ರಸ್ತೆಯಲ್ಲೇ ಧಗಧಗಿಸಿ ಹೊತ್ತಿ ಉರಿದಿರೋ ಘಟನೆ ಚಾಮರಾಜಪೇಟೆಯ ಮಕ್ಕಳಕೂಟದ ಬಳಿ ನಡೆದಿದೆ.
ಮಕ್ಕಳ ಕೂಡದ ಬಳಿಯಲ್ಲಿ ತೆರಳುತ್ತಿದ್ದಂತ ಬಿಎಂಟಿಸಿ ಬಸ್, ಕೆ ಆರ್ ಮಾರುಕಟ್ಟೆಗೆ ತೆರಳುತ್ತಿದ್ದಂತ ವೇಳೆ, ಕಾಣಿಸಿಕೊಂಡಂತ ಬೆಂಕಿಯಿಂದಾಗಿ ಧಗಧಗಿಸಿ ಹೊತ್ತಿ ಉರಿದಿದೆ. ಕೂಡಲೇ ಅಲ್ಲೇ ಇದ್ದಂತ ಮಹಾನಗರ ಪಾಲಿಕೆಯ ಕಸದ ವಾಹನದಿಂದ ನೀರಿನಿಂದ ಬೆಂಕಿ ನಂದಿಸೋ ಕಾರ್ಯವನ್ನು ನಡೆಸಲಾಯಿತು. ಬಳಿಕ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಪ್ರಯಾಣಿಕರನ್ನು ಕೆಳಗೆ ಇಳಿಸಿದ ಕಾರಣ, ಭಾರೀ ಅನಾಹುತ ತಪ್ಪಿದೆ.
Advertisement. Scroll to continue reading.
ಶಾರ್ಟ್ ಸರ್ಕ್ಯೂನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗುತ್ತಿದೆ.