Connect with us

Hi, what are you looking for?

Diksoochi News

ರಾಜ್ಯ

ಮೈಸೂರಿನಲ್ಲೊಂದು ಅಪರೂಪದ ಮದುವೆ: 65 ವರ್ಷದ ವಧುವನ್ನು ವರಿಸಿದ 85 ವರ್ಷದ ವರ!

2

ಮೈಸೂರು : 85 ವರ್ಷದ ವೃದ್ಧ, 65 ವರ್ಷದ ವೃದ್ಧೆಯನ್ನು ವರಿಸಿರುವ ಘಟನೆ ಉದಯಗಿರಿಯಲ್ಲಿ ನಡೆದಿದೆ.

ಗೌಸಿಯಾನಗರದ ನಿವಾಸಿಯಾಗಿದ್ದಂತ ಹಾಜಿ ಮುಸ್ತಾಫಾ ಅವರು, ಕುರಿ ಸಾಕಾಣಿಕೆ ಕೆಲಸ ಮಾಡುತ್ತಾ, ತಮ್ಮ ಮಕ್ಕಳನ್ನು ಮದುವೆ ಮಾಡಿ, ಉತ್ತಮ ಜೀವನ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಅವರ ಪತ್ನಿಯನ್ನು ಕಳೆದುಕೊಂಡಿದ್ದರು.

ಹೀಗಾಗಿ ಇಳಿ ವಯಸ್ಸಿನಲ್ಲಿಯೂ ತಮಗೊಬ್ಬರು ಬಾಳ ಸಂಗಾತಿ ಬೇಕು ಅಂತ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಒಂಟಿ ಜೀವನ ಸಾಗಿಸುತ್ತಿದ್ದಂತ ಫಾತಿಮಾ ಬೇಗಂ ಸಿಕ್ಕರು. ಮದುವೆಯ ಪ್ರಸ್ತಾಪವಿಟ್ಟಾಗ ಫಾತಿಮಾ ಬೇಗಂ ಒಪ್ಪಿಕೊಂಡರು.

Advertisement. Scroll to continue reading.

ಮುಸ್ತಾಫಾ ತಾನು ಮತ್ತೊಂದು ಮದುವೆ ಆಗೋ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾರೆ. ಆಗ ಮಕ್ಕಳು, ಮೊಮ್ಮಕ್ಕಳು ಸೇರಿ ಸರಳವಾಗಿ ಮನೆಯಲ್ಲಿಯೇ ಹಾಜಿ ಮುಸ್ತಾಫಾ ಹಾಗೂ ಫಾತಿಮಾ ಬೇಗಂ ಅವರಿಬ್ಬರಿಗೆ ನಿಖಾ ಮಾಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!