ನವದೆಹಲಿ: ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಸುಭಾಷ್ ಚಂದ್ರಬೋಸ್ ಅವರ ಹೊಲೊಗ್ರಾಮ್ ಪ್ರತಿಮೆಗೆ ಚಾಲನೆ ನೀಡಿದರು.
ಈ ಸಂದರ್ಭಗಳು ಪ್ರಧಾನಿ ಮೋದಿ ಅವರು, 2019, 2020, 2021 ಮತ್ತು 2022 ರ ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರವನ್ನ ಸಹ ನೀಡಿದರು.
ನಂತರ ಮಾತನಾಡಿದ ಪ್ರಧಾನಿ ಮೋದಿ, ಇದು ಐತಿಹಾಸಿಕ ತಾಣ, ಇದು ಐಸಿಹಾಸಿಕ ದಿನವಾಗಿದೆ. ನೇತಾಜಿ ಒಗ್ಗಟ್ಟಿನ ಪ್ರತೀಕ ಎಂದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆ ಪೂರ್ಣಗೊಳ್ಳುವವರೆಗೂ, ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಇರುತ್ತದೆ.
ಈ ಮುನ್ನ ಕಿಂಗ್ ಜಾರ್ಜ್ ವಿ ಅವರ ಪ್ರತಿಮೆ ಈ ಸ್ಥಳದಲ್ಲಿತ್ತು. ಆದರೆ ಅದನ್ನು 1968ರಲ್ಲಿ ತೆಗೆದುಹಾಕಲಾಗಿತ್ತು. ಇದೀಗ ನೇತಾಜಿ ಅವರ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ.
ಅಂದ್ಹಾಗೆ, ಹೊಲೊಗ್ರಾಮ್ ಪ್ರತಿಮೆಯು 30,000 ಲ್ಯೂಮೆನ್ಸ್ 4 ಸಾವಿರ ಪ್ರೊಜೆಕ್ಟರ್ʼನಿಂದ ಚಾಲಿತವಾಗಿದೆ. ಅಗೋಚರವಾದ ಹೋಲೋಗ್ರಾಫಿಕ್ ಪರದೆಯನ್ನು ಸಂದರ್ಶಕರಿಗೆ ಗೋಚರಿಸದ ರೀತಿಯಲ್ಲಿ ನಿರ್ಮಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 3ಡಿ ಚಿತ್ರವನ್ನು ಹೊಲೊಗ್ರಾಮ್ ಪರಿಣಾಮವನ್ನ ಸೃಷ್ಟಿಸಲು ಅದರ ಮೇಲೆ ಬಿಂಬಿಸಲಾಗಿದೆ. ಹೊಲೊಗ್ರಾಮ್ ಪ್ರತಿಮೆಯ ಗಾತ್ರವು 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ.

