ವರದಿ : ಬಿ.ಎಸ್.ಆಚಾರ್ಯ
ಕರಾವಳಿ ಜಿಲ್ಲೆಯ ರಥೋತ್ಸವಗಳಿಗೆ ತಟ್ಟಿರಾಯ ಒಂದು ಮೆರಗು. ಆದರೆ ಅದನ್ನು ಕಲಾತ್ಮಕವಾಗಿ ತಯಾರು ಮಾಡುವ ಕಲಾವಿದರು ಭಾರೀ ವಿರಳ.
ಬಾರಕೂರು ದಿವಂಗತ ಉದ್ದಾಲಗುಡ್ಡೆ ಮಂಜುನಾಥ ಆಚಾರ್ಯರಿಗೆ ಹಲವಾರು ಕಲಾತ್ಮಕ ತಟ್ಟಿರಾಯನ್ನು ಮಾಡಿದ ಹೆಗ್ಗಳಿಕೆಯಿದೆ.
ಇದೀಗ ಬಾರಕೂರು ಕಚ್ಚೂರು ಮಾಲ್ತೀದೇವಿ ದೇವಸ್ಥಾನದ ರಥೋತ್ಸವಕ್ಕೆ ಬಡಗುತಿಟ್ಟಿನ ಯಕ್ಷಗಾನ ಶೈಲಿಯ ತಟ್ಟಿರಾಯನನ್ನು ತುಂಬಾ ಕಲಾತ್ಮಕವಾಗಿ ಮಂಜುನಾಥ ಆಚಾರ್ಯರ ಮಗ ಕೃಷ್ಣ ಆಚಾರ್ಯ ತಯಾರು ಮಾಡಿ ಗಮನ ಸೆಳೆದಿದ್ದಾರೆ.


ಕಳೆದ ಮೂರು ತಿಂಗಳಿಂದ ಅವರು ತಟ್ಟಿರಾಯನ ಕೆಲಸದಲ್ಲಿ ಅವರ ಜೊತೆ ಬಿಬಿಎಂ ಮತ್ತು ಕಲಾ ವಿಭಾಗದ ತರಬೇತಿ ಪಡೆದ ಅವರ ಮಗ ಸನತ್ ಜೊತೆಯಾಗಿ 2 ಅವಳಿ ಜವಳಿ ಮಾದರಿಯ ತಟ್ಟಿರಾಯ ಸಿದ್ಧಗೊಂಡಿದೆ.
ಪಾಲೆ ಮರದಿಂದ ಮುಖ ಮತ್ತು ಕೈಗಳನ್ನು ತಯಾರು ಮಾಡಿ ದೇಹದ ಆಕಾರ ಬರಲು ಪ್ಲಾಸ್ಟಿಕ್ ಪಟ್ಟಿಯನ್ನು ಬಳಸಿ ಅದರ ಮೇಲೆ ಫೈಭರ್ ಲೇಪನ ಮಾಡಿ ಯಕ್ಷಗಾನ ಶೈಲಿಯ ಬಟ್ಟೆಯಿಂದ ಯಕ್ಷಗಾನದ ಸಾಂಪ್ರದಾಯಕ ಉಡುಪು ಮತ್ತು ಆಭರಣದಿಂದ ರಚಿಸಲಾಗಿದೆ.

ಒಟ್ಟು 9.5 ಅಡಿ ಎತ್ತರ 65 ಕೆಜಿ ಭಾರ ದಲ್ಲಿ 2 ತಟ್ಟಿರಾಯ ಸಿದ್ಧಗೊಂಡು ಓರ್ವ ವ್ಯಕ್ತಿ ಅದನ್ನು ಹೊತ್ತು ರಥೋತ್ಸವಕ್ಕೆ ಸಾಗಬಹುದು.
ಬಾರಕೂರು ಭಾಗದಲ್ಲಿ ಮಾತ್ರ ಕಲೆಯಲ್ಲಿ ಗುರುತಿಸಿಕೊಂಡ ಕೃಷ್ಣ ಆಚಾರ್ಯರು ಬಾರಕೂರು ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನಕ್ಕೆ ಮಾಡಲಾದ ಕಲಾತ್ಮಕ ತಟ್ಟಿರಾಯ ಇಲ್ಲಿ ನಡೆಯುವ ರಥೋತ್ಸವದಂದು ನಾಡಿನಾದ್ಯಂತ ಗುರುತಿಸಿಕೊಂಡು ಕಲೆಯಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎನ್ನುವುದು ಕಲಾಸಕ್ತರ ಹಾರೈಕೆ.

ತಂದೆಯವರು ಬಾರಕೂರಿನ ಕೆಲವು ಭಾಗದ ತಟ್ಟಿರಾಯನನ್ನು ಮಾಡಿದ್ದರು . ಕಚ್ಚೂರು ಮಾಲ್ತೀ ದೇವಿ ದೇವಸ್ಥಾನದ ಆಡಳಿತದವರು ಅಲ್ಲಿನ ದೇವಸ್ಥಾನಕ್ಕೆ ತಟ್ಟಿರಾಯನನ್ನು ಮಾಡಲು ಅವಕಾಶ ನೀಡಿದರು ಹಗಲು ಇರುಳು ಎನ್ನದೆ ಏಕ ರೂಪದಲ್ಲಿ ಮಾಡಿದ ಮುಖದ ರಚನೆ ನನಗೆ ಅರಿವಿಲ್ಲದಂತೆ ದೇವರ ಅನುಗ್ರಹದಿಂದ ರೂಪುಗೊಂಡಿದೆ. ಅನೇಕರು ಮೆಚ್ಚಿಕೊಂಡಿದ್ದಾರೆ .ಕೃಷ್ಣ ಆಚಾರ್ಯ, ತಟ್ಟಿರಾಯ ರಚನಾ ಶಿಲ್ಪಿ, ಬಂಡೀಮಠ

2 ವರ್ಷದ ಹಿಂದೆ ನಮ್ಮ ದೇವಸ್ಥಾನಕ್ಕೆ ಹೊಸ ರಥ ನಿರ್ಮಾಣ ಮಾಡಲಾಗಿತ್ತು . ರಥೋತ್ಸವಕ್ಕೆ ತಟ್ಟಿರಾಯ ಒಂದು ಮೆರಗು ನಮ್ಮ ಊರಿನಲ್ಲೆ ಇರುವ ಕೃಷ್ಣ ಆಚಾರ್ಯರಿಗೆ ನೀಡುವ ಸಂಕಲ್ಪ ಮಾಡಿ ಅವರಿಗೆ ನೀಡಿದೆವು ಸುಂದರವಾಗಿ ಮತ್ತು ಕಲಾತ್ಮಕವಾಗಿ ಮಾಡಿದ್ದಾರೆ.ಗೋಕುಲ್ ದಾಸ್, ಬಾರಕೂರು ಧರ್ಮದರ್ಶಿಗಳು,
ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನ ಮತ್ತು ಬಬ್ಬುಸ್ವಾಮಿ ಮೂಲಕ್ಷೇತ್ರ, ಬಾರಕೂರು


































