ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : 73 ನೇ ಗಣರಾಜ್ಯೋತ್ಸವ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು. ಬ್ರಹ್ಮಾವರ ತಾಲೂಕು ತಹಶಿಲ್ದಾರ ರಾಜಶೇಖರ ಮೂರ್ತಿ ಧ್ವಜಾರೋಹಣ ಮಾಡಿದರು.
ಈ ಸಂದರ್ಭ ಅವರು ಮಾತನಾಡಿ, ಹಲವಾರು ಭಾಷೆ ಜಾತಿ ಧರ್ಮಗಳ ಭಾರತ ದೇಶದಲ್ಲಿ 40 ಕೋಟಿ ಜನಸಂಖ್ಯೆ ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡಲಾದ ಸಂವಿದಾನ 140 ಕೋಟಿ ಜನ ಇರುವ ಇಂದಿನ ದಿನಕ್ಕೂ ಸೂಕ್ತವಾಗುವಂತೆ ಮಾಡಲಾದ ದೇಶದ ಅನೇಕ ಜನರ ದೂರದರ್ಶಿತ್ವದ ಫಲವಾಗಿದೆ. ದೇಶ ಮುಖ್ಯ ಎನ್ನುವ ಭಾವನೆಯನ್ನು ಭಾರತೀಯರು ಅಳವಡಿಸಿಕೊಳ್ಳ ಬೇಕು ಎಂದರು.

ನಿವೃತ್ತ ಮುಖ್ಯೋಪದ್ಯಾಯ ಆರೂರು ತಿಮ್ಮಪ್ಪ ಶೆಟ್ಟಿ ಮುಖ್ಯ ಭಾಷಣ ಮಾಡಿದರು.
ಬ್ರಹ್ಮಾವರ ಪೋಲೀಸ್ ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನೆ ಇವರ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ, ಮತ್ತು ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ಜರುಗಿತು.


ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಚ್ . ವಿ ಇಬ್ರಾಹಿಂ ಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯ್ಕ್ , ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಂದಾಡಿ, ಗ್ರಾಮಪಂಚಾಯತಿ ಅಧ್ಯಕ್ಷ ಉದಯಪೂಜಾರಿ ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.



































