Connect with us

Hi, what are you looking for?

Diksoochi News

ಸಿನಿಮಾ

ಜೇಮ್ಸ್ ಪೋಸ್ಟರ್ ಬಿಡುಗಡೆ: ಯೋಧನಾಗಿ ಕಾಣಿಸಿಕೊಂಡ ಪುನೀತ್ ರಾಜ್ ಕುಮಾರ್

3

ಚಂದನವನ : ನಟ ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಇಡೀ ಕರುನಾಡೆ ಕಾಯುತ್ತಿದೆ. ಜೇಮ್ಸ್‌ ಸಿನಿಮಾವನ್ನು ಎಲ್ಲರೂ ಎದುರು ಕಾಯುತ್ತಿದ್ದಾರೆ. ಗಣರಾಜ್ಯೋತ್ಸವದ ದಿನವಾದ ಇಂದು ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಗಣರಾಜ್ಯೋತ್ಸವದ ಪ್ರಯುಕ್ತ ‘ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಈಗಾಗಲೇ ಪೋಸ್ಟರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ವೈರಲ್‌ ಆಗಿದ್ದು, ಪುನೀತ್‌ ರಾಜ್‌ಕುಮಾರ್ ಅವರ ಲುಕ್‌ಗೆ ಅಭಿಮಾನಿಗಳು, ಪ್ರೇಕ್ಷಕ ವರ್ಗ, ಸಿನಿಮಾ ಮಂದಿ ಮನಸೋತಿದ್ದಾರೆ.

5 ಭಾಷೆಗಳಲ್ಲಿ ಜೇಮ್ಸ್‌:

ಸದ್ಯ ‘ಜೇಮ್ಸ್‌’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಸಿನಿಮಾದ ರಿಲೀಸ್ ಬಗ್ಗೆ ನಿರ್ದೇಶಕ ಚೇತನ್‌ ಕುಮಾರ್‌ ಅವರು ಪ್ರಮುಖ ಅಂಶವನ್ನು ಹಂಚಿಕೊಂಡಿದ್ದಾರೆ. ‘ಜೇಮ್ಸ್’ ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾ ಆಗಲಿದೆ. ಭಾರತದಾದ್ಯಂತ ಈ ಚಿತ್ರ ಒಟ್ಟಿಗೆ 5 ಭಾಷೆಗಳಲ್ಲಿ ತೆರೆಕಾಣಲಿದೆ. ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಈ ಕುರಿತು ಟ್ವೀಟ್ ಮಾಡುವ ಮೂಲಕ ನಿರ್ದೇಶಕ ಚೇತನ್‌ ಕುಮಾರ್‌ ಅವರು ಸ್ಪಷ್ಟ ಪಡಿಸಿದ್ದಾರೆ.

Advertisement. Scroll to continue reading.

‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ :

ನಟ ಪುನೀತ್‌ ರಾಜ್‌ಕುಮಾರ್ ಅವರ ಲುಕ್‌, ಅವರ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು, ಪೋಸ್ಟರ್ ನೋಡಿ ಸಿನಿಮಾದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ!? ಎಂಬ ಪ್ರಶ್ನೆ ಹುಟ್ಟಿದೆ. ಚಿತ್ರದ ಪೋಸ್ಟರ್‌ನಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರು ಸೈನಿಕನ ಸಮವಸ್ತ್ರ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ಕಾಣಿಸಿಕೊಂಡಿದ್ದಾರೆ. ಜೊತೆಗೆ ಪೋಸ್ಟರ್‌ನಲ್ಲಿ ‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎನ್ನುವ ಟ್ಯಾಗ್‌ ಲೈನ್‌ ಇದೆ.

ಪೋಸ್ಟರ್ ಹಂಚಿಕೊಂಡ ಅಶ್ವಿನಿ ಪುನೀತ್ ಮತ್ತು ಶಿವರಾಜ್ ಕುಮಾರ್; ಪೋಸ್ಟರ್ ವೈರಲ್ :

‘ಜೇಮ್ಸ್‌’ ಸಿನಿಮಾದ ಹೊಸ ಪೋಸ್ಟರನ್ನು ಪುನೀತ್ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಅವರು ಹಂಚಿಕೊಂಡು, ಈ ಮೂಲಕ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ನಟ ಶಿವರಾಜ್ ಕುಮಾರ್‌ ಅವರು ‘ಜೇಮ್ಸ್’ ಪೋಸ್ಟರ್ ಹಂಚಿಕೊಂಡು ‘ಜೇಮ್ಸ್‌ ರೂಪದಲ್ಲಿ ಅಪ್ಪು, ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಪೋಸ್ಟರ್ ಈಗಾಗಲೇ ವೈರಲ್ ಆಗಿದ್ದು, ಅಭಿಮಾನಿಗಳು,ಪ್ರೇಕ್ಷಕರು ಹಂಚಿಕೊಳ್ಳುತ್ತಿದ್ದಾರೆ.

Advertisement. Scroll to continue reading.

ಯಾವಾಗ ರಿಲೀಸ್?

ಅಂದ್ಹಾಗೆ ಜೇಮ್ಸ್ ಯಾವಾಗ ತೆರೆಗೆ ಬರುತ್ತೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಜೇಮ್ಸ್ ರೂಪದಲ್ಲಿ ಅಪ್ಪುವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಅಪ್ಪು ಹುಟ್ಟು ಹಬ್ಬದ ದಿನವಾದ ಮಾರ್ಚ್ 17 ರಂದು ಚಿತ್ರ ತೆರೆಗೆ ಬರಲಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಅಧಿಕೃತವಾಗಿ ಪ್ರಕಟಗೊಂಡಿಲ್ಲ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!