ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬೈಕಾಡಿ ಬಬ್ಬುಸ್ವಾಮಿ, ಕೊರಗಜ್ಜ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಗುರುವಾರ ಜರುಗಿತು.

ಸಂಜೆ ಜರುಗಿದ ಸಭಾ ಕಾರ್ಯಕ್ರಮದಲ್ಲಿ 24 ದೈವಗಳ ಮದಿಪುಗಾರ ಅಬುಬಕರ್ ಮಾತನಾಡಿ ದೈವ ದೇವರುಗಳ ತುಳು ನಾಡಿನಲ್ಲಿ ಮುಸ್ಲೀಂ ಜನಾಂಗದಲ್ಲಿ ನಾನು ಜನಿಸಲು ಕಾರಣ ದೈವದ ಇಚ್ಚೆಯಾಗಿತ್ತು. ಇಲ್ಲಿನ ಜನರು ದೈವಗಳಿಂದ ದೂರ ಇದ್ದರೆ ಕುಟುಂಭ ಮತ್ತು ಸಮಾಜದಿಂದ ದೂರವಾಗುತ್ತಾನೆ. ಸಾಧ್ಯವಾದಷ್ಟು ದೈವಸ್ಥಾನಗಳನ್ನು ಜಿರ್ಣೋದ್ದಾರ ಮಾಡಿದಲ್ಲಿ ದೈವಗಳು ರಕ್ಷಣೆ ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ನಿರ್ಮಾಣಕಾರ್ಯಕ್ಕೆ ನೆರವಾದವರನ್ನ ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.

ಜೀಣೋದ್ಧಾರ ಸಮಿತಿಯ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಗುರಿಕಾರ ಭಾಸ್ಕರ್ ಸಾಲಿಕೇರಿ, ಹಾರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ವಾರಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಲಾಬಿ, ಸಾಮಾಜಿಕ ನ್ಯಾಯ ಸಮಿತಿಯ ಮಾಜಿ ಅಧ್ಯಕ್ಷೆ ವಸಂತಿ ಪೂಜಾರಿ, ನಿತ್ಯಾನಂದ ಶೆಟ್ಟಿ , ಜ್ಞಾನ ವಸಂತ ಶೆಟ್ಟಿ ಇನ್ನಿತರು ಉಪಸ್ಥಿತರಿದ್ದರು.
ಬಳಿಕ ನಾನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಿತು.




































