ಕ್ರೀಡೆ: ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್ ಟೇಲರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮೂರೂವರೆ ವರ್ಷಗಳ ಕಾಲ ನಿಷೇಧಿಸಿದೆ.
ಈ ಕುರಿತು ಶುಕ್ರವಾರ ಐಐಸಿ ಹೇಳಿಕೆ ಬಿಡುಗಡೆ ಮಾಡಿದೆ ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿರುವ ನಾಲ್ಕು ಆರೋಪಗಳನ್ನು ಮತ್ತು ಡೋಪಿಂಗ್ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ಒಂದು ಪ್ರತ್ಯೇಕ ಆರೋಪವನ್ನ ಒಪ್ಪಿಕೊಂಡ ನಂತ್ರ ಬ್ರೆಂಡನ್ ಟೇಲರ್ ಅವರಿಗೆ ಎಲ್ಲಾ ರೀತಿಯ ಕ್ರಿಕೆಟ್ ನಿಂದ ಮೂರೂವರೆ ವರ್ಷಗಳ ನಿಷೇಧವನ್ನ ಹೇರಲಾಗಿದೆ ಎಂದು ಐಸಿಸಿ ಪ್ರಕಟಿಸಿದೆ.
ಕೆಲ ದಿನಗಳ ಹಿಂದೆ ಟ್ವಿಟರ್ ನಲ್ಲಿ ಈ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿದ್ದ ಬ್ರೆಂಡನ್ ಟೇಲರ್, ಭಾರತ ಪ್ರವಾಸದಲ್ಲಿದ್ದ ವೇಳೆ ನಾನು ಕೊಕೇನ್ ಸೇವನೆ ಮಾಡುತ್ತಿದ್ದ ವಿಡಿಯೋವನ್ನು ಉದ್ಯಮಿಯೊಬ್ಬರು ಚಿತ್ರೀಕರಣ ಮಾಡಿದ್ದರು. ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡುವಂತೆ ಒಪ್ಪಂದ ಮಾಡಿಕೊಳ್ಳಲು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳಿದ್ದರು. ಈಗಾಗಲೇ ತಾವು ಪುನಃಶ್ಚೇತನ ಕ್ಲಿನಿಕ್ ಗೆ ಸೇರಿರುವುದಾಗಿ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ನಾನು ಕೆಲವು ಡ್ರಗ್ ಟೆಸ್ಟ್ ಗಳನ್ನು ಉಲ್ಲಂಘನೆ ಮಾಡುತ್ತಾ ಬಂದಿದ್ದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಕೊನೆಯ ಪಂದ್ಯದ ವೇಳೆ, 2021ರ ಸೆಪ್ಟೆಂಬರ್ ನಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದೆ ಎಂದು ಬ್ರೆಂಡನ್ ಟೇಲರ್ ಹೇಳಿದ್ದರು.


































