Connect with us

Hi, what are you looking for?

Diksoochi News

ಕರಾವಳಿ

ಕೋಟ: ಯಕ್ಷಗಾನದ ಮೌಲ್ಯ ಉಳಿಸುವಲ್ಲಿ ಹವ್ಯಾಸಿ ಕಲಾವಿದರ ಕೊಡುಗೆ ಅನನ್ಯ: ಸತೀಶ್ ಹೆಚ್. ಕುಂದರ್

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಯಕ್ಷಗಾನದ ಮೌಲ್ಯ ಹಾಗೂ ಪರಂಪರೆಯನ್ನು ಉಳಿಸುವಲ್ಲಿ ಹವ್ಯಾಸಿ ಕಲಾವಿದರ ಕೊಡುಗೆ ಅನನ್ಯವಾಗಿದೆ ಎಂದು ಮಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಹೇಳಿದ್ದರು.


ಗುರುವಾರ ಕೋಟದ ರಾಜಶೇಖರ ದೇವಳದಲ್ಲಿ ಗಿಳಿಯಾರು ಯುವಕ ಮಂಡಲ ಗಿಳಿಯಾರು ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಡುಪಿ ಸಹಯೋಗದೊಂದಿಗೆ ಕೋಟ ಪಂಚವರ್ಣ ಯುವಕ ಮಂಡಲದ ಕಲಾವಿದರಿಂದ ಮಧುರಾ ಮಹೀಂದ್ರಾ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಸಂಘಸಂಸ್ಥೆಗಳು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಕಲಾರಾಧನೆಯಲ್ಲಿ ತೋಡಗಿಕೊಂಡಿರುವುದು ಶ್ಲಾಘನೀಯ, ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯಕ್ಕೆ ಯಕ್ಷಗಾನದ ಅಭಿರುಚಿ ಬೆಳೆಸುವ ಅಗತ್ಯತೆಯನ್ನು ಮನಗಾಣಿಸಿ ಯಕ್ಷಗಾನಶುದ್ಧ ಕನ್ನಡದ ಭಾಷಾ ಪ್ರತೀಕವಾಗಿ ಹೊರಹೊಮ್ಮಿದ್ದು ಪ್ರತಿಯೊಬ್ಬರು ಈ ರಂಗದಲ್ಲಿ ತೋಡಗಿಕೊಂಡರೇ ಯಕ್ಷಕಲೆಯ ಜೊತೆ ಭಾಷಾಭಿಮಾನದ ಬೀಜ ಬಿತ್ತಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement. Scroll to continue reading.


ಕೋಟ ಅಮೃತೇಶ್ವರಿ ದೇವಳದ ಧರ್ಮದರ್ಶಿ ಎಂ ಸುಬ್ರಾಯ ಆಚಾರ್ಯ ಮಾತನಾಡಿ ಯಕ್ಷಗಾನ ಕಲೆಯು ಸಂಸ್ಕ್ರತಿ ಅನಾವರಣಗೈಯುವ ಜೊತೆ ಪರಿಶುದ್ಧ ಭಾಷಾ ಪರಿಜ್ಞಾನ ಬೆಳೆಸುತ್ತಿದೆ.ಯಕ್ಷಗಾನವು ವಿವಿಧ ದೇವಳಗಳ ವೃತ್ತಿಪರ ಮೇಳಗಳ ಮೂಲಕ ಹರಕೆಯ ಸಲ್ಲಿಸುವ ಭಕ್ತಿರಂಗಕ್ಷೇತ್ರವಾಗಿದೆ.ಇತ್ತೀಚಿಗಿನ ದಿನಗಳಲ್ಲಿ ಕೊರೋನಾದಿಂದ ಕಲಾವಿದರ ಪಾಡು ಶೋಚನೀಯ ಸ್ಥಿತಿಗೆ ತಲುಪುವಂತೆ ಮಾಡಿದೆ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.


ಸಭೆಯ ಅಧ್ಯಕ್ಷತೆಯನ್ನು ಗಿಳಿಯಾರು ಯುವಕ ಮಂಡಲದ ಉಪಾಧ್ಯಕ್ಷ ರಾಘವೇಂದ್ರ ಶೆಟ್ಟಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಮೃತ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ಯುವಕ ಮಂಡಲದ ಕಾರ್ಯದರ್ಶಿ ನಿತೀನ್ ಕುಮಾರ್ ಕೋಟ ಸ್ವಾಗತಿಸಿದರೆ, ಸಂಚಾಲಕ ಅಜಿತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

ಕಾರ್ಯಕ್ರಮದ ನಂತರ ಪಂಚವರ್ಣ ಕಲಾವಿದರಿಂದ ಮಧುರಾ ಮಹೀಂದ್ರ ಯಕ್ಷಗಾನ ಪ್ರದರ್ಶನ ಜರಗಿತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!