ವರದಿ: ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿಜಿಸ್ಟರ್ ಬ್ರಹ್ಮಾವರ ತಾಲೂಕು ಉಪ್ಪೂರು ವಲಯದ ಉಪ್ಪೂರು, ಹಾವಂಜೆ, ಹೇರೂರು, ಹಾರಾಡಿ ಕಾರ್ಯಕ್ಷೇತ್ರಗಳ ಸಿ ಎಸ್ ಸಿ ಕೇಂದ್ರಗಳನ್ನು ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಭಟ್ ಮತ್ತು ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ರಾಜು ಪೂಜಾರಿ ನೆರವೇರಿಸಿದರು.
ಬಳಿಕ ಮಾತನಾಡಿ, ಜನರು ಯಾವುದೇ ದಾಖಲಾತಿಗಳು ಪಡೆಯಬೇಕಾದರೆ ಅನಾವಶ್ಯಕವಾಗಿ ಅಲೆದಾಟ ಮಾಡಿ ಕ್ಲಪ್ತ ಸಮಯಕ್ಕೆ ಸೇವೆ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಿ ಎಸ್ ಸಿ ಕೇಂದ್ರಗಳನ್ನು ತೆರೆಯುವ ಮೂಲಕ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿ ದಿನೇಶ್ ಶೇರಿಗಾರ್ ರವರು ಮಾತನಾಡಿ, ಕೇಂದ್ರ ಸರಕಾರದ ಈ ಮಹತ್ವದ ಯೋಜನೆಗೆ ರಾಜ್ಯ ಸರಕಾರದ ಸೇವಾ ಸಿಂಧು ಜೋಡಣೆಯಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲಾ ಸೇವೆ ಗಳು ಸವಲತ್ತುಗಳು ಯೋಜನೆಗಳ ಜನಸಾಮಾನ್ಯರಿಗೆ ಒಂದೇ ವೇದಿಕೆಯಲ್ಲಿ ಒದಗಿಸುವಂತಹ ಜನಸಾಮಾನ್ಯರ ಕಲ್ಪವೃಕ್ಷ ಸಿ ಎಸ್ ಸಿ ಆಗಿದೆ ಎಂದು ತಿಳಿಸಿದರು.
ಉಪ್ಪೂರು ವಲಯದ ಅಧ್ಯಕ್ಷೆ ಮಮತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕಿ ಬಾಬಿ ಎಂ. ನಿರೂಪಿಸಿದರು. ಕೊಳಲಗಿರಿ ಸೇವಾ ಪ್ರತಿನಿಧಿ ಶಶಿಕಲಾ ಅವರು ಸ್ವಾಗತಿಸಿ, ತೆಂಕಬೆಟ್ಟು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ ವಂದಿಸಿದರು.

































