ಉಡುಪಿ : ಯುವ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಬಲಪಾಡಿ ಮಜ್ಜಿಗೆಪಾದೆಯಲ್ಲಿ ನಡೆದಿದೆ.
ಉಡುಪಿ ಗುರುಕೃಪಾ ಟ್ರೇಡರ್ಸ್ ಮಾಲಕ ಹಾಗೂ ಸುರೇಶ್ ಪೈ ಅವರ ಪುತ್ರ ಕಾರ್ತಿಕ್ ಪೈ ಆತ್ಮಹತ್ಯೆ ಮಾಡಿಕೊಂಡವರು.
ವೈಯಕ್ತಿಕ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.